ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

ಇಂಫಾಲ್: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮೂಲದ ಭಯೋತ್ಪಾದಕ ಸಂಘಟನೆಗಳು (Terrorist Group) ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ (Manipur Violence) ಬಳಸಿಕೊಂಡು ಭಾರತದ ವಿರುದ್ಧವೇ ಯುದ್ಧ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮಣಿಪುರದ ಬೆಟ್ಟದ ಜಿಲ್ಲೆ ಚುರಾಚಂದ್‌ಪುರದಲ್ಲಿ ಶಂಕಿತನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಶಂಕಿತ ಉಗ್ರನ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗಿದೆ.

ಮಣಿಪುರದಲ್ಲಿ ಜನಾಂಗೀಯ ದ್ವೇಷದಿಂದ ಉಂಟಾದ ಹಿಂಸಾಚಾರವನ್ನ ಬಳಸಿಕೊಂಡು ಭಾರತದ ವಿರುದ್ಧವೇ ಕೃತ್ಯ ಎಸಗಲು ಎರಡೂ ದೇಶಗಳ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿದ್ದವು ಎಂದು ರಾಷ್ಟ್ರೀಯ ತನಿಖಾ ದಳ (NIA) ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ – ಈ ಕಾಯ್ದೆಯ ವಿಶೇಷತೆ ಏನು?

ಈ ಕುರಿತು ಟ್ವಿಟ್ಟರ್ (X) ಖಾತೆಯಲ್ಲಿ ಪತ್ರಿಕಾ ಪ್ರಕಟಣೆ ಹಂಚಿಕೊಂಡಿರುವ NIA, ಆರೋಪಿಯನ್ನು ಸೆಮಿನ್‌ಲುನ್ ಗ್ಯಾಂಗ್ಟೆ ಎಂದು ಹೆಸರಿಸಿದೆ. ಈತ ಮಣಿಪುರದಲ್ಲಿ ಅಶಾಂತಿ ಮತ್ತು ಜನಾಂಗೀಯ ದ್ವೇಷವನ್ನ ಬಳಸಿಕೊಂಡು ಭಾರತದ ವಿರುದ್ಧ ಯುದ್ಧ ರೂಪಿಸಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದ್ದ. ಸಂಘಟನೆಗಳ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿಸಿದೆ. ಇದನ್ನೂ ಓದಿ: ತಾಯಿ, ಸಹೋದರಿಯರಿಗೆ ಅವಮಾನ – ದೇಶವೇ ಮಣಿಪುರದೊಂದಿಗೆ ನಿಂತಿದೆ: ಮೋದಿ

ಆರೋಪಿ ಸೆಮಿನ್‌ಲುನ್ ಗ್ಯಾಂಗ್ಟೆ (Seiminlun Gangte) ಕಳೆದ ಜೂನ್ 22 ರಂದು ಮಣಿಪುರದ ಕ್ವಾಕ್ಟಾದಲ್ಲಿ ಕಾರ್‌ಬಾಂಬ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬನ ಹತ್ಯೆಗೆ ಕಾರಣವಾಗಿದ್ದ ಎಂಬುದು ಪೊಲೀಸರಿಂದ ತಿಳಿದುಬಂದಿದೆ. ಅಂದು ಸಣ್ಣ ಸೇತುವೆಯ ಮೇಲೆ ನಿಂತಿದ್ದ ಕಾರು ಸ್ಫೋಟಗೊಂಡ ನಂತರ ಮಣಿಪುರದಲ್ಲಿ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿತ್ತು. ಇದು ತರಬೇತಿ ಪಡೆದ ಭಯೋತ್ಪಾದಕ ಕೈಗಳಿಂದ ನಡೆದ ದಾಳಿಯಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿತ್ತು.

ಇದೀಗ ಗ್ಯಾಂಗ್ಟೆಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ ಈತ ಯಾವ ಭಯೋತ್ಪಾದಕ ಗುಂಪಿಗೆ ಸೇರಿದವನೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಎನ್‌ಐಎ ಹೇಳಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]