ಮಡಿಲಲ್ಲಿ ತಂಗಿಯನ್ನುಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಬಾಲಕಿಗೆ ಬೋರ್ಡಿಂಗ್ ಸ್ಕೂಲ್‍ನಲ್ಲಿ ಫ್ರೀ ಸೀಟ್

ಇಂಫಾಲ್: ಎರಡು ವರ್ಷದ ಸಹೋದರಿಯನ್ನು ಮಡಿಲಲ್ಲಿಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಮಣಿಪುರದ 10 ವರ್ಷದ ಬಾಲಕಿಯ ಫೋಟೋ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಾಲಕಿಗೆ ಇಂಫಾಲ್‍ನ ಬೋರ್ಡಿಂಗ್ ಶಾಲೆಯಲ್ಲಿ ಪ್ರವೇಶಾತಿ ಸಿಕ್ಕಿದೆ.

ಈ ಕುರಿತ ಮಾಹಿತಿಯನ್ನು ಮಣಿಪುರ ಸರ್ಕಾರದ ವಿದ್ಯುತ್, ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಬಿಸ್ವಜೀತ್ ತೊಂಗಮ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಮೇನಿಂಗ್ಸಿನ್ಲಿಯು ಪಮೇಯ್ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ. ಭರವಸೆ ನೀಡಿದಂತೆ ನಾನು ಅವಳನ್ನು ಇಂಫಾಲ್‍ನಲ್ಲಿರುವ ಬೋರ್ಡಿಂಗ್ ಶಾಲೆಯಾದ ಸ್ಲೋಪ್‍ಲ್ಯಾಂಡ್ ಪಬ್ಲಿಕ್ ಸ್ಕೂಲ್‍ಗೆ ಸೇರಿಸಿದ್ದೇನೆ. ಬಣ್ಣಗಳಂತೆ ಅವಳು ಕಂಗೋಳಿಸಲಿ ಎಂದು ನಾನು ನಯಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಸಚಿವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ರಷ್ಯಾದ ಜನರಲ್‌ಗಳನ್ನು ಕೊಲ್ಲಲು ಉಕ್ರೇನ್‌ಗೆ ಅಮೆರಿಕ ಗುಪ್ತಚರ ಸಹಾಯ

ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಪಮೇಯ್ ತಮ್ಮ ಮಡಿಲಲ್ಲಿ ಎರಡು ವರ್ಷದ ಮಗುವನ್ನು ಮಲಗಿಸಿಕೊಂಡು ಓದುತ್ತಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋವನ್ನು ಗಮನಿಸಿದ ಸಚಿವರು ಬಾಲಕಿಯ ಕುಟುಂಬವನ್ನು ಪತ್ತೆ ಹಚ್ಚಿ ಅವರನ್ನು ಇಂಫಾಲ್‍ಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೀಗ ಬಾಲಕಿ ಪದವಿ ಶಿಕ್ಷಣ ಪೂರೈಸುವವರೆಗೂ ಶಿಕ್ಷಣದ ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು 2 ವರ್ಷ ಸಹಿಸಿಕೊಳ್ಳಬೇಕು: ಹಣಕಾಸು ಸಚಿವ

Comments

Leave a Reply

Your email address will not be published. Required fields are marked *