ಉಡುಪಿ: ಮಂಗಳೂರು (Mangaluru) ಹಾಗೂ ಉಡುಪಿ (Udupi)ಯವರು ಶಿಸ್ತಿನ ಜನಗಳು. ಬಹಳ ಕಾಲದಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದೀರಿ. ಮುಂದಿನ ಚುನಾವಣೆಯಲ್ಲೂ ಉಡುಪಿಯ ಐದು ಸೀಟು ಗೆಲ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B. S Yediyurappa) ಹೇಳಿದ್ದಾರೆ.

ಕಾಪು ಜನಸಂಕಲ್ಪದಲ್ಲಿ ಮಾತನಾಡಿದ ಬಿಎಸ್‍ವೈ, ನರೇಂದ್ರ ಮೋದಿ (Narendra Modi) ಪ್ರಧಾನಿಯಾದ ನಂತರ ಅವಿಶ್ರಾಂತ ಆಡಳಿತ ನೀಡಿದ್ದಾರೆ. ಜಗತ್ತೇ ಮೆಚ್ವುವ ವ್ಯಕ್ತಿ ಪ್ರಧಾನಿ ಮೋದಿ. ಕಾರ್ಯಕರ್ತರು ಎಲ್ಲಾ ಚುನಾವಣೆ (Election) ಗೆಲ್ಲಿಸಿ ಬಹುಮತ ಸಾಬೀತು ಮಾಡಬೇಕು ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅವ್ರಿಂದ ಜೆಡಿಎಸ್ ಮುಕ್ತ ಮಾಡಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ

ಸಿಎಂ ಆಗುವ ಭ್ರಮೆಯಲ್ಲಿರುವ ಕಾಂಗ್ರೆಸ್ (Congress) ನಾಯಕರು ಆಸೆ ಬಿಡೋದು ಒಳ್ಳೆಯದು. ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ. ನಾನು ಚಾಮರಾಜ ನಗರದಿಂದ, ಬೊಮ್ಮಾಯಿ (Basavaraj Bommai) ಉತ್ತರ ಕನ್ನಡದಿಂದ ಪ್ರವಾಸ ಮಾಡುತ್ತಾರೆ. 140ಕ್ಕೂ ಹೆಚ್ವು ಸೀಟು ಗೆದ್ದು ಪ್ರಧಾನಿಗೆ ಗೌರವ ತಂದು ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿಯವರೇ ನೀವು ಸಿಎಂ ಆಗೋದು ಡೌಟ್, BJPಗೆ ಬಂದುಬಿಡಿ- ಮುನಿರತ್ನ ಆಹ್ವಾನ

ಮೋದಿ ನ.11 ಬೆಂಗಳೂರಿಗೆ ಬರುತ್ತಾರೆ. ಮೂರು-ನಾಲ್ಕು ಲಕ್ಷ ಜನ ಸೇರ್ತಾರೆ, ಶಕ್ತಿಪ್ರದರ್ಶನ ಮೂಲಕ ಗಮನಸೆಳೀತ್ತೇವೆ. ಕಾಂಗ್ರೆಸ್ಸಿಗರೇ ಭ್ರಮೆ ಬಿಟ್ಟು ವಾಸ್ತವ ಮಾತಾಡಿ. ರಾಹುಲ್ ಗಾಂಧಿ ಮೋದಿ ಎದುರು ಬಚ್ಚಾ ಅಂದ್ರೆ ನನ್ನ ಟೀಕೆ ಮಾಡಿದ್ರು. ಇದು ನನ್ನ ಪ್ರಾಮಾಣಿಕ ಅನಿಸಿಕೆ. ರಾಹುಲ್ (Rahul Gandhi) ಹೋದಲ್ಲಿ ಕಾಂಗ್ರೆಸ್ ಸೋಲುತ್ತೆ ಎಂದು ಬಿಎಸ್‍ವೈ ವಾಗ್ದಾಳಿ ನಡೆಸಿದರು.

Leave a Reply