ಪ್ರತಿ ಶಾಲೆಗೆ ತೆರಳಿ ನಾಟ್ಯ ಕಲೆಗಳ ಬಗ್ಗೆ ಅರಿವು ಮೂಡಿಸ್ತಿದ್ದಾರೆ ಮಂಗ್ಳೂರಿನ ರಾಧಿಕಾ ಶೆಟ್ಟಿ

ಮಂಗಳೂರು: ಈಗಿನ ಯುವ ಜನಾಂಗಕ್ಕೆ ಹಿಪ್-ಹಾಪ್ ಡಾನ್ಸ್‍ಗಳಂದರೆ ಅಚ್ಚು ಮೆಚ್ಚು. ಶಾಸ್ತ್ರೀಯ ನೃತ್ಯ ಪ್ರಕಾರಗಳ ಬಗ್ಗೆ ಆಸಕ್ತಿ ಕಡಿಮೆ. ಹೀಗಾಗಿ ಮಂಗಳೂರಿನ ಭರತನಾಟ್ಯ ಕಲಾವಿದೆಯೊಬ್ಬರು ಸಣ್ಣ ಮಕ್ಕಳಲ್ಲಿಯೇ ಶಾಸ್ತ್ರೀಯ ನೃತ್ಯಗಳತ್ತ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಶಾಲೆಗೆ ತೆರಳಿ ನಾಟ್ಯ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸುತ್ತಿದ್ದಾರೆ.

ಅಷ್ಟಕ್ಕೂ ಇವರು ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಿರೋ ಸ್ಪರ್ಧಿಯಲ್ಲ. ಬದಲಿಗೆ ಮಕ್ಕಳಿಗೆ ಶಾಸ್ತ್ರೀಯ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಕಲಾವಿದೆ ರಾಧಿಕಾ ಶೆಟ್ಟಿ. ಮಂಗಳೂರಿನ ಬಿಕರ್ನಕಟ್ಟೆಯ ಸರಕಾರಿ ಶಾಲೆಯಲ್ಲಿ ಈಕೆ ಹೀಗೆ ಅಭಿನಯ ಮಾಡುತ್ತಿದ್ದಾರೆ.

ಮಂಗಳೂರಿನ ಬಿಜೈನಲ್ಲಿರುವ ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿಯಾಗಿರುವ ರಾಧಿಕಾ ಶೆಟ್ಟಿ, ಶಾಸ್ತ್ರೀಯ ಕಲೆಗಳ ಬಗ್ಗೆ ಅರಿವು ಇಲ್ಲದಿರುವುದನ್ನು ಗಮನಿಸಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತೆರಳಿ ನಾಟ್ಯ ಕಲೆಗಳ ಬಗ್ಗೆ ಪ್ರಚಾರಾಂದೋಲನ ಮಾಡುತ್ತಿದ್ದಾರೆ. ಶಾಲಾ ಮಕ್ಕಳೆಲ್ಲಿದ್ದರಲ್ಲೇ ಭರತನಾಟ್ಯದ ಪ್ರಾತ್ಯಕ್ಷಿಕೆ ನೀಡುವುದರ ಜೊತೆಗೆ ಮುದ್ರೆ, ಆಂಗಿಕ ಅಭಿನಯಗಳ ಅರ್ಥವನ್ನು ಹೇಳಿಕೊಡುತ್ತಿದ್ದಾರೆ. ಆ ಮೂಲಕ ಮಕ್ಕಳಲ್ಲಿ ಶಾಸ್ತ್ರೀಯ ಕಲೆಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಶಾಸ್ತ್ರೀಯ ಕಲೆಗಳ ಬಗ್ಗೆ ಸಾಮಾನ್ಯವಾಗಿ ಜನಸಾಮಾನ್ಯರಿಗೆ ಅರಿವು ಇರುವುದಿಲ್ಲ. ಹೀಗಾಗಿ ಮಕ್ಕಳಿಂದಲೇ ಈ ನಾಟ್ಯ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವ ಕಲಾವಿದೆಯ ಸೇವೆ ನಿಜಕ್ಕೂ ಶ್ಲಾಘನೀಯ.

 

 

 

Comments

Leave a Reply

Your email address will not be published. Required fields are marked *