ಹಿಂದೂ ಅಂತಾ ಹೇಳಿ ಮದ್ವೆಯಾದ – ನಿಜ ಗೊತ್ತಾಗ್ತಿದಂತೆ ಪತ್ನಿಯಿಂದ್ಲೇ ಬಿತ್ತು ಗೂಸಾ

ಮಂಗಳೂರು: ಹಿಂದೂ ಎಂದು ಸುಳ್ಳು ಹೇಳಿ ಯುವತಿಯನ್ನು ಯಾಮಾರಿಸಿ ಮದುವೆಯಾದ ಮುಸ್ಲಿಂ ವ್ಯಕ್ತಿಗೆ ಪತ್ನಿಯೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜಿಲ್ಲೆಯ ತೊಕ್ಕೊಟ್ಟು ಬಳಿಯ ಕುಂಪಲದಲ್ಲಿ ಘಟನೆ ನಡೆದಿದ್ದು, ಸಯ್ಯದ್ ಎಂಬಾತ ಪತ್ನಿಯಿಂದ ಹೊಡೆತ ತಿಂದ ವ್ಯಕ್ತಿ. ಸದ್ಯ ಈತ ಉಳ್ಳಾಲ ಪೊಲೀಸರ ವಶದಲ್ಲಿದ್ದಾನೆ.

ಏನಿದು ಘಟನೆ: ಮೂಲತಃ ಸುಳ್ಯ ನಿವಾಸಿಯಾದ ಸಯ್ಯದ್ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು ಸುಳ್ಳು ಹೇಳಿ ಮಂಗಳೂರಿನ ಮಾಲ್ ಒಂದರಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬರನ್ನು ಪ್ರೀತಿಸಿದ್ದ. ಅಲ್ಲದೇ ಎರಡು ವರ್ಷಗಳ ಹಿಂದೆ ಇಬ್ಬರು ಮದುವೆ ಸಹ ಆಗಿದ್ದರು. ಆದರೆ ಕಳೆದ ಆರು ತಿಂಗಳ ಹಿಂದೆ ಪತಿ ಸುಳ್ಳು ಹೇಳಿ ಮದುವೆಯಾಗಿರುವ ವಿಚಾರ ಪತ್ನಿಗೆ ತಿಳಿದಿದೆ. ಇದರಿಂದ ನೊಂದ ಪತ್ನಿ ಗಂಡನ ಮನೆ ಬಿಟ್ಟು ತವರು ಸೇರಿದ್ದರು.

ಇಂದು ಮತ್ತೆ ಪತ್ನಿಯ ಮನೆಗೆ ಆಗಮಿಸಿದ್ದ ವೇಳೆ ಇಬ್ಬರ ವೇಳೆ ಇದೇ ವಿಚಾರವಾಗಿ ಜಗಳ ಆರಂಭವಾಗಿದ್ದು, ಪತ್ನಿ ಮತ್ತು ಆಕೆಯ ತಂಗಿ ಸೇರಿ ಸಯ್ಯದ್ ನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿ ವಶಕ್ಕೆ ಒಪ್ಪಿಸಿದ್ದಾರೆ. ಇದೇ ವೇಳೆ ಸಯ್ಯದ್ ಯುವತಿಯನ್ನು ಮದುವೆ ಆಗುವ ಮುನ್ನವೇ ಸುಳ್ಯದಲ್ಲಿಯೂ ಮತ್ತೊಂದು ಮದುವೆಯಾಗಿದ್ದ ಎಂದು ತಿಳಿದುಬಂದಿದೆ.

https://www.youtube.com/watch?v=N9byJwNaW7A

Comments

Leave a Reply

Your email address will not be published. Required fields are marked *