ವಿಡಿಯೋ: ಮಾರ್ಕೆಟ್‍ನಲ್ಲಿ ತರಕಾರಿ ವಿಂಗಡಿಸುತ್ತಿದ್ದ ಯುವಕನ ಮೇಲರಗಿ ಬಂತು ಪಿಕ್‍ಅಪ್ ಟ್ರಕ್

ಮಂಗಳೂರು: ನಿಂತಿದ್ದ ಪಿಕ್ ಅಪ್ ಟೆಂಪೋವೊಂದು ಚಾಲಕನ ಅವಂತರದಿಂದ ಯುವಕನಿಗೆ ಗುದ್ದಿದ ಪರಿಣಾಮ ಆತ ಕೆಳಗೆ ಬಿದ್ದ ಘಟನೆ ನಗರದ ಸೆಂಟ್ರಲ್ ಮಾರ್ಕೆಟ್‍ನಲ್ಲಿ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಂಟ್ರಲ್ ಮಾರ್ಕೆಟ್‍ನಲ್ಲಿ ಸೋಮವಾರ ಬೆಳಗ್ಗೆ ಸುಮಾರು 7.52ಕ್ಕೆ ತರಕಾರಿಗಳನ್ನು ವಿಂಗಡನೆ ಮಾಡುತ್ತಿದ್ದ ಕಾರ್ಮಿಕ ಯುವಕನ ಮೇಲೆ ಅಲ್ಲೇ ನಿಲ್ಲಿಸಿದ್ದ ಪಿಕ್‍ಅಪ್ ಟ್ರಕ್ ಹರಿದಿದೆ. ನಿಂತಿದ್ದ ಪಿಕ್‍ಅಪ್ ಟ್ರಕ್ ಚಲಾಯಿಸಲು ಆರಂಭಿಸಿದ ವೇಳೆ ಚಾಲಕ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದು ಯುವಕನಿದ್ದ ಕಡೆಗೆ ಬಂದಿದೆ. ಇದನ್ನ ನೋಡಿದ ಯುವಕ ಪಕ್ಕಕ್ಕೆ ಸರಿಯಬೇಕು ಎನ್ನುವಷ್ಟರಲ್ಲಿ ವಾಹನ ಆತನನ್ನೇ ಎಳೆದುಕೊಂಡು ಮುಂದೆ ಹೋಗಿದೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಳಿಕ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಈ ಘಟನೆಯಲ್ಲಿ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯಾದಿಂದ ಪಾರಾಗಿದ್ದಾನೆ.

https://www.youtube.com/watch?v=kSUHsKocWfc

 

 

Comments

Leave a Reply

Your email address will not be published. Required fields are marked *