ಮಂಗಳೂರು: ಬಶೀರ್ ಅಂತಿಮ ದರ್ಶನ ಪಡೆಯಲು ತೆರಳಿದ ಸುರತ್ಕಲ್ ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಅವರ ವಿರುದ್ಧ ಬಶೀರ್ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ.3 ರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೆ ಒಳಗಾಗಿ ಇಂದು ಮುಂಜಾನೆ ಮೃತ ಪಟ್ಟಿದ್ದ ಬಶೀರ್ ಅವರ ಅಂತಿಮ ದರ್ಶನ ಪಡೆಯಲು ನಗರದ ಎಜೆ ಆಸ್ಪತ್ರೆಗೆ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಆಗಮಿಸಿದ್ದು, ಈ ವೇಳೆ ಬಶೀರ್ ಕುಟುಂಬ ಸದಸ್ಯರು ನೀವು ಏಕೆ? ಇಲ್ಲಿಗೆ ಬಂದಿದ್ದೀರ. ನಿಮ್ಮ ರಾಜಕೀಯ ಇಲ್ಲಿ ಪ್ರದರ್ಶಿಸುವುದು ಇಲ್ಲಿ ಬೇಡ ಎಂದು ಘೇರಾವ್ ಹಾಕಿದ್ದಾರೆ.

ಕೃಷ್ಣ ಪಾಲೇಮಾರ್ ಅವರು ಮೃತ ಬಶೀರ್ ಆಂತಿಮ ದರ್ಶನ ಪಡೆದು ಆಸ್ಪತ್ರೆಯಿಂದ ಹೊರ ಬರುವ ವೇಳೆ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿದ್ದ ಹಲವರು ಕೃಷ್ಣ ಪಾಲೇಮಾರ್ ಅವರನ್ನು ಮಾಧ್ಯಮಗಳಿಗೆ ಹೇಳಿಕೆ ಕೊಡದಂತೆ ಅಡ್ಡಿ ಪಡಿಸಿದ್ದಾರೆ. ಈ ವೇಳೆ ಎಜೆ ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಶೀರ್ ಸಾವಿಗೂ ಮುನ್ನ ಸಾವನ್ನಪ್ಪಿದ್ದ ದೀಪಕ್ ರ ಶವ ಯಾತ್ರೆ ನಡೆಸಲು ಒತ್ತಡ ಹೇರಿದ ಆರೋಪ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರ ವಿರುದ್ಧ ಕೇಳಿ ಬಂದಿದ್ದು, ಅಲ್ಲಿ ರಾಜಕೀಯ ಮಾಡುವವರು ಇಲ್ಲಿ ರಾಜಕೀಯ ಪ್ರದರ್ಶಿಸುವುದು ಬೇಡ ಎಂಬ ಆಕ್ರೋಶ ವ್ಯಕ್ತವಾಗಿದೆ.
ಬಶೀರ್ ಸಹೋದರ ನೆರೆದಿದ್ದ ಜನರ ಬಳಿ ಗಲಾಟೆ ಮಾಡದಂತೆ ಮನವಿ ಮಾಡಿಕೊಂಡಿದ್ದು, ಅಲ್ಲಾಹ್ ಮೇಲೆ ಪ್ರಮಾಣ ಮಾಡಿಸಿದ ಘಟನೆಯೂ ನಡೆಯಿತು.
https://www.youtube.com/watch?v=KovIF1Pqxto






Leave a Reply