ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ

– ಟಿಪ್ ಟಾಪ್ ಆಗಿ ಬಂದು ಬಾಂಬ್ ಇಟ್ಟು ಹೋದ

ಮಂಗಳೂರು: ಮಂಗಳೂರು ವಿಮಾನದಲ್ಲಿ ಬಾಂಬ್ ಇಟ್ಟು ಹೋದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಶಂಕಿತ ಉಗ್ರನ ಚಲನವಲನಗಳ ಒಟ್ಟು 13 ವಿಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಟೊಪ್ಪಿ ಧರಿಸಿದ್ದ ಶಂಕಿತ ಉಗ್ರ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಆಟೋದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಬಳಿಕ ಕಾರ್ ಪಾರ್ಕಿಂಗ್ ಮಧ್ಯದ ರಸ್ತೆಯಲ್ಲಿ ನಡೆದುಕೊಂಡು ವಿಮಾನ ನಿಲ್ದಾಣ ಪ್ರವೇಶಿಸಿದ್ದ. ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಇಟ್ಟು ಕೈಯಲ್ಲಿ ಒಂದು ಪುಸ್ತಕ ಹಿಡಿದು ಅಲ್ಲಿಂದ ಎಸ್ಕೆಲೇಟರ್ ಮೂಲಕ ಕೆಳಗೆ ಇಳಿದು ಬಂದಿದ್ದ. ಬಳಿಕ ಹೊರ ಬಂದು ವೇಗವಾಗಿ ಹೆಜ್ಜೆ ಹಾಕಿ ಆಟೋ ಹತ್ತಿ ಶಂಕಿತ ಪರಾರಿಯಾಗಿದ್ದಾನೆ. ಶಂಕಿತ ಉಗ್ರನ ಚಲನವಲನದ ಒಟ್ಟು 13 ವಿಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:  ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್ ಇಟ್ಟು ವಾಪಸ್ ಹೋದವ ಸ್ಫೋಟಕವಿದ್ದ ಬ್ಯಾಗ್ ಬಿಟ್ಟು ಹೋಗಿದ್ದ. ಈ ಸಂಬಂಧ ಶಂಕಿತನ ಫೋಟೋ ಮತ್ತು ರಿಕ್ಷಾದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳಲು ಆರಂಭವಾಯಿತೋ ಆಗ ರಿಕ್ಷಾ ಚಾಲಕ ಶಾಕ್ ಆಗಿದ್ದ. ಕೂಡಲೇ ಪೊಲೀಸರ ಮುಂದೆ ಆತ ಹಾಜರಾಗಿ ಇರುವ ವಿಷಯವನ್ನು ತಿಳಿಸಿದ್ದ. ರಾತ್ರಿ ಪೊಲೀಸರು ಆತನನ್ನು ವಿಚಾರಣೆ ನಡೆಸಿ ಬಿಟ್ಟುಬಿಟ್ಟಿದ್ದರು. ಇದನ್ನೂ ಓದಿ: ಬಾಂಬ್ ಪತ್ತೆ ಪ್ರಕರಣದ ಬಗ್ಗೆ ನಾಯಕರು ಜವಾಬ್ದಾರಿ ಅರಿತು ಮಾತನಾಡಬೇಕು: ಹರ್ಷ

ಎರಡು ಬ್ಯಾಗ್: ಖಾಸಗಿ ಬಸ್ಸಿನಲ್ಲಿ ಬಂದ ಮಧ್ಯ ವಯಸ್ಕ ಶಂಕಿತ ವ್ಯಕ್ತಿ ಬಳಿಯಲ್ಲಿ ಎರಡು ಬ್ಯಾಗ್ ಇತ್ತು. ಕೆಂಜಾರಿನಲ್ಲಿ ಇಳಿದ ಆತ ಒಂದು ಬ್ಯಾಗನ್ನು ಸೆಲೂನ್ ಅಂಗಡಿ ಬಳಿ ಇರಿಸಿದ್ದ. ಈ ವೇಳೆ ಮಾಲೀಕರು ಆ ಬ್ಯಾಗನ್ನು ಹೊರಗಡೆ ಇಡು ಎಂದು ಹೇಳಿದ್ದರು. ಹೀಗಾಗಿ ಬ್ಯಾಗನ್ನು ಹೊರಗಡೆ ಇಟ್ಟು ಆತ ರಿಕ್ಷಾ ಏರಿ ವಿಮಾನ ನಿಲ್ದಾಣದ ಕಡೆ ಪ್ರಯಾಣಿಸಿದ್ದ.

ಬೆಳಗ್ಗೆ 8:50ಕ್ಕೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಹೊರ ಭಾಗದಲ್ಲಿ ಬ್ಯಾಗ್ ಇರಿಸಿ ರಿಕ್ಷಾ ಏರಿದ್ದ. ಬಜ್ಪೆ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದವ ಆಟೋದಲ್ಲಿ ಚಾಲಕನೊಂದಿಗೆ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದ. ಬಳಿಕ ಕೆಂಜಾರಿಗೆ ತೆರಳಿ ಅಂಗಡಿಯಲ್ಲಿ ಇಟ್ಟಿದ್ದ ಬ್ಯಾಗನ್ನು ಎತ್ತಿಕೊಂಡಿದ್ದ. ಪ್ರಯಾಣದ ಅವಧಿಯಲ್ಲಿ ಯಾವುದೇ ಆತಂಕ ತೋರಿಸಿಕೊಂಡಿಲ್ಲ. ಆರಾಮಾಗಿ ಮಾತನಾಡುತ್ತಾ ಪಂಪ್‍ವೆಲ್ ತಲುಪಿ ರಿಕ್ಷಾ ಚಾಲಕನಿಗೆ 400 ರೂ. ನೀಡಿದ್ದ. ಇದನ್ನೂ ಓದಿ:  ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

ಆಟೋ ಚಾಲಕ ಕೊಟ್ಟ ಮಾಹಿತಿ ಆಧರಿಸಿ ಒಂದು ಹಂತಕ್ಕೆ ಶಂಕಿತ ಯಾರು ಎನ್ನುವುದನ್ನು ಅಂದಾಜಿಸಿರುವ ಪೊಲೀಸರು ಇದೀಗ ಮೂರು ವಿಶೇಷ ತಂಡಗಳಲ್ಲಿ ಆತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: ಎಚ್‍ಡಿಕೆಗಾಗಿ ಅರ್ಧ ಗಂಟೆ ಕಾದು ಭೇಟಿಯಾದ ಮಂಗ್ಳೂರು ಪೊಲೀಸ್ ಆಯುಕ್ತ ಹರ್ಷ

Comments

Leave a Reply

Your email address will not be published. Required fields are marked *