ಮಂಡ್ಯ: ಮುಂದೊಂದು ದಿನ ಈತ ರಾಜನಂತೆ ಬಾಳುತ್ತಾನೆ ಎಂದು ಯಡಿಯೂರಪ್ಪನವರಿಗೆ ಬಾಲ್ಯದಲ್ಲೇ ಸ್ವಾಮೀಜಿಗಳು ಆಶೀರ್ವಾದ ಸಿಕ್ಕಿತ್ತು.
ಯಡಿಯೂರಪ್ಪ ಚಿಕ್ಕಂದಿನಲ್ಲೇ ರಾಜನ ರೀತಿ ಇದ್ದವರು. ಅವರನ್ನು ನೋಡಿ ಬೇಬಿ ಮಠದ ಸ್ವಾಮಿ ಇವನು ಮುಂದೊಂದು ದಿನ ರಾಜನಂತೆ ಬಾಳುತ್ತಾನೆ ಎಂದು ಆಶೀರ್ವಾದ ಮಾಡಿದ್ದರು ಎಂದು ಬಿಎಸ್ವೈ ಅತ್ತಿಗೆ ಶಾರದಮ್ಮ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಯಡಿಯೂರಪ್ಪ ಸ್ವಗ್ರಾಮ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾರದಮ್ಮ, ಯಡಿಯೂರಪ್ಪ ಇದೇ ಮನೆಯಲ್ಲಿ ಹುಟ್ಟಿ ಬೆಳೆದಿದ್ದು. ಹಿಂದೆ ಈ ಜಾಗದಲ್ಲಿ ಹಳೇ ಮನೆಯಿತ್ತು. ಈಗ ಹೊಸ ಮನೆ ಕಟ್ಟಲಾಗಿದೆ ಎಂದು ಹೇಳಿದರು.

ಮೈದುನ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದು ತಡವಾಗುತ್ತಿದೆಯಲ್ಲ ಎಂದು ಎರಡು ದಿನದಿಂದ ಸರಿಯಾಗಿ ಊಟ ಕೂಡ ಸೇರುತ್ತಿರಲಿಲ್ಲ. ಇದೀಗ ಅವರು ಮುಖ್ಯಮಂತ್ರಿ ಆಗುತ್ತಿರುವುದು ನಮಗೆ ಅತೀವ ಖುಷಿಯಾಗಿದೆ ಎಂದು ಬಿಎಸ್ವೈ ಅತ್ತಿಗೆ ಶಾರದಮ್ಮ ಸಂಭ್ರಮ ವ್ಯಕ್ತಪಡಿಸಿದರು.

Leave a Reply