ಮಂಡ್ಯ: ಇಂದು ಬೆಳಗ್ಗೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಕಾಲಭೈರವೇಶ್ವರ ದೇವರ ಜಾತ್ರೆಯಲ್ಲಿ ಕೆಂಡೋತ್ಸವ ಕಾರ್ಯಕ್ರಮದಲ್ಲಿ ಪೂಜಾರಿಯೊಬ್ಬರು ಕೆಂಡ ಹಾಯುವಾಗ ಎಡವಿ ಬೆಂಕಿಯಲ್ಲಿ ಬಿದ್ದಿದ್ದಾರೆ.
ಕುಮಾರ್ ಎಂಬವರೇ ಬೆಂಕಿಯಲ್ಲಿ ಬಿದ್ದು ಗಾಯಗೊಂಡಿರುವ ವ್ಯಕ್ತಿ. ಕುಮಾರ್ ಅವರಿಗಿಂತ ಮುಂಚೆ ಆರು ಜನ ಯಶ್ವಸಿಯಾಗಿ ಹಾಯ್ದಿದ್ದರು. ಏಳನೇಯವರಾಗಿ ಬಂದ ಕುಮಾರ್ ತಲೆಯ ಮೇಲೆ ದೇವರ ಮೂರ್ತಿಯನ್ನು ಹೊತ್ತುಕೊಂಡು ಹೋಗುವಾಗ ಎಡವಿ ಬಿದ್ದಿದ್ದಾರೆ.
ಬಸರಾಳು ಗ್ರಾಮದಲ್ಲಿ ಪ್ರತಿ ವರ್ಷಕ್ಕೊಮ್ಮೆ ನಡೆಯುವ ಕಾಲಭೈರವೇಶ್ವರ ದೇವರ ಜಾತ್ರೆಯಲ್ಲಿ ಕೆಂಡ ಹಾಯುವ ಆಚರಣೆ ನಡೆದುಕೊಂಡು ಬಹಳ ದಿನಗಳಿಂದ ನಡೆದುಕೊಂಡು ಬಂದಿದೆ. ಕೂಡಲೇ ಸ್ಥಳೀಯರು ಕುಮಾರ್ ಅವರನ್ನು ರಕ್ಷಿಸಿದ್ದಾರೆ. ಕುಮಾರ್ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.
https://www.youtube.com/watch?v=f7zKaj5WW1Y


Leave a Reply