ಮಂಡ್ಯ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಸಖತ್ ಪ್ರಶಂಸೆ

ಮಂಡ್ಯ: ಸದಾ ಖಾಕಿ ಸಮವಸ್ತ್ರ ಧರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಜನರ ಜೀವ ಉಳಿಸಲು ಸಹಾಯ ಮಾಡುವ ಸಲುವಾಗಿ ರಕ್ತದಾನ ಶಿಬಿರ ಏರ್ಪಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜೀವಧಾರೆ ಟ್ರಸ್ಟ್ ಸಹಕಾರದೊಂದಿಗೆ ಇಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಜನಸ್ನೇಹಿ ಪೊಲೀಸ್ ಹೆಸರಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹಲಗೂರು ಠಾಣೆಯಲ್ಲಿ ಪೊಲೀಸ್ ಆಗಿರುವ ಪ್ರಭು ತಮ್ಮ ಪೊಲೀಸ್ ಗೆಳೆಯರೊಂದಿಗೆ ಸೇರಿ ರಕ್ತದಾನ ಶಿಬಿರ ಏರ್ಪಡಿಸಿದ್ರು.

ರಕ್ತದಾನ ಶಿಬಿರದಲ್ಲಿ ಸ್ವತಃ ಪೊಲೀಸರು ರಕ್ತದಾನ ಮಾಡಿ ಮಾದರಿಯಾದ್ರು. ಪೊಲೀಸರೊಂದಿಗೆ ಸುಮಾರು 200 ಕ್ಕೂ ಹೆಚ್ಚು ಸಾರ್ವಜನಿಕರು ರಕ್ತದಾನ ಮಾಡಿದ್ರು. ಪೊಲೀಸರ ಜನಸ್ನೇಹಿ ಕಾರ್ಯವನ್ನು ನೋಡಿ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ರು.

 

Comments

Leave a Reply

Your email address will not be published. Required fields are marked *