ರೈತರೊಂದಿಗೆ ಗದ್ದೆಗಿಳಿದು ನಾಟಿ ಮಾಡಲಿದ್ದಾರೆ ಸಿಎಂ ಎಚ್‍ಡಿಕೆ!

ಮಂಡ್ಯ: ಜಿಲ್ಲೆಯಲ್ಲಿ ಭತ್ತದ ನಾಟಿ ಕೆಲಸ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಿಯಲ್ ಮಣ್ಣಿನ ಮಗನಾಗಲಿದ್ದಾರೆ.

ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ, ಅರಳಕುಪ್ಪೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ನಾಟಿ ಕೆಲಸ ಮಾಡುವ ಮೂಲಕ ಮಣ್ಣಿನ ಮಗನಾಗಲಿದ್ದಾರೆ. ಆಗಸ್ಟ್ 11 ರಂದು ಸಿಎಂ ಅವರು ಗದ್ದೆಗಿಳಿದು ರೈತರ ಜೊತೆ ನಾಟಿ ಮಾಡಲಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ರೈತರೊಂದಿಗೆ ದುಡಿಯಲಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಮಾಹಿತಿ ನಿಡಿದ್ದಾರೆ.

ಕೇವಲ ತೋರಿಕಗೆ ಭತ್ತ ನಾಟಿ ಮಾಡದೇ ಬರೋಬ್ಬರಿ ಮೂರು ಗಂಟೆಗಳ ಕಾಲ ಗದ್ದೆಯಲ್ಲಿ ಕೆಲಸ ಮಾಡಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಜೊತೆ ತಾನು ರೈತನಾಗಲಿದ್ದಾರೆ. ರೈತರ ಜೊತೆ ನಾವಿದ್ದೇವೆ, ನಮ್ಮದು ರೈತ ಪರ ಸರ್ಕಾರ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಈ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ.

1980ರ ದಶಕದಲ್ಲಿ ಕುಮಾರಸ್ವಾಮಿ ಜಮೀನಿನ ಹುಡುಕಾಟದಲ್ಲಿದ್ದರು. ಕೊನೆಗೆ ರಾಮನಗರ ಜಿಲ್ಲೆಯ ಕೇತಿಗಾನಹಳ್ಳಿಯಲ್ಲಿ ಜಮೀನು ಪಡೆದಿದ್ದರು. ಆರಂಭದಲ್ಲಿ ಈ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಪ್ರತಿ ದಿನ ಸುಮಾರು 8, 9 ಗಂಟೆ ಜಮೀನಿನಲ್ಲಿ ಎಚ್‍ಡಿಕೆ ಕೆಲಸ ಮಾಡುತ್ತಿದ್ದರು. 48 ಎಕರೆ ವಿಸ್ತೀರ್ಣದ ತೋಟದ ಈ ಜಾಗದಲ್ಲಿ 1992-93 ರಲ್ಲಿ ಮನೆ ಕಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *