ಮಂಡ್ಯ: ನನ್ನ ಚುನಾವಣೆ ವೆಚ್ಚಕ್ಕೆ ಮೂರು ರೂಪಾಯಿ ಬಡ್ಡಿಗೆ ತಂದಿದ್ದ ಹಣವನ್ನು ನಾರಾಯಣಗೌಡರಿಗೆ ಕೊಟ್ಟು ತಪ್ಪು ಮಾಡಿಬಿಟ್ಟೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾಲೂಕಿನ ಪಕ್ಷದ ಕಾರ್ಯಕರ್ತರ ಈ ಸ್ಥಿತಿಗೆ ನಾನೂ ಕಾರಣ. ನಾರಾಯಣಗೌಡರ ಮೇಲೆ ಕುಮಾರಣ್ಣ ನಂಬಿಕೆ ಇಟ್ಟಿದ್ದರು. ಈ ನಂಬಿಕೆಯನ್ನು ಅವರು ಹಾಳುಮಾಡಿಕೊಂಡರು ಎಂದು ಹೇಳಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಣ್ಣ ಅವರ ಆಜ್ಞೆ ಪಾಲಿಸುವ ಸಲುವಾಗಿ ನಾರಾಯಣಗೌಡ ಅವರಿಗೆ ಟಿಕೆಟ್ ಕೊಡಿಸಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದೆ. ಆ ಸಮಯದಲ್ಲಿ ಅವರು ಚುನಾವಣೆಗೆ ಖರ್ಚು ಮಾಡಲು ಹಣ ಇಲ್ಲ ಎಂದು ನಮ್ಮ ಬಳಿ ಬಂದಿದ್ದರು. ನನ್ನ ಚುನಾವಣೆ ವೆಚ್ಚಕ್ಕೆ ಮೂರು ರೂಪಾಯಿ ಬಡ್ಡಿಗೆ ತಂದಿದ್ದ ಹಣವನ್ನು ನಾರಾಯಣಗೌಡರಿಗೆ ಕೊಟ್ಟು ತಪ್ಪು ಮಾಡಿಬಿಟ್ಟೆ. ಆ ಕಾರಣಕ್ಕೆ ಕ್ಷಮೆ ಇರಲಿ ಎಂದು ಜನರಲ್ಲಿ ಕೇಳಿಕೊಂಡರು.

ಮಾಧ್ಯಮಗಳಲ್ಲಿ ಬರುತ್ತಿರುವ ಬೆಳವಣಿಗೆ ಕೆ.ಆರ್ ಪೇಟೆಯಲ್ಲಿ ಆಗುತ್ತಿಲ್ಲ. ನಿಮ್ಮೆಲ್ಲರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನು ಚುನಾವಣೆ ಬಂದಾಗ ನಿರ್ಧರಿಸುತ್ತೇವೆ ಎಂದು ಪರೋಕ್ಷವಾಗಿ ನಿಖಿಲ್ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.

Leave a Reply