ಮಾಂಡೋಸ್ ಚಂಡಮಾರುತಕ್ಕೆ ಕೂಲ್ ಕೂಲ್- ನಾಲ್ಕೈದು ದಿನ ಬೆಂಗಳೂರಲ್ಲಿ ಭಾರೀ ಚಳಿ

ಬೆಂಗಳೂರು: ಸಿಲಿಕಾನ್ ಸಿಟಿ ಈಗ ಕೂಲ್ ಕೂಲ್ ಸಿಟಿಯಾಗಿದೆ. ಒಂದು ಕಡೆ ವಿಪರೀತ ಚಳಿ, ಮತ್ತೊಂದು ಕಡೆ ತುಂತುರು ಮಳೆ. ಈ ಸಡನ್ ವಾತಾವರಣ ಬದಲಾವಣೆಗೆ ಕಾರಣವಾಗಿದ್ದು ಮಾಂಡೋಸ್ ಚಂಡಮಾರುತ (Mandous Cyclone).

ಹೌದು. ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲಿ ಭಾರೀ ಮಳೆ (Rain) ಅಗ್ತಿದೆ. ಜೊತೆಗೆ ರಣ ಚಳಿ ಬೆಂಗಳೂರಿಗರನ್ನ ಮನೆಯಲ್ಲಿ ಕೂರುವಂತೆ ಮಾಡುತ್ತಿದೆ. ಮಾಂಡೋಸ್ ಚಂಡಮಾರುತ ಗಂಟೆಗೆ 85 ಕಿಲೋ ಮೀಟರ್ ವೇಗವಾಗಿ ಭೂಮಿಗೆ ಅಪ್ಪಳಿಸಿದ್ದು, ಇದರಿಂದಾಗಿ ರಣ ಮಳೆ ಜೊತೆಗೆ ವಿಪರೀತ ಚಳಿ ಹೆಚ್ಚಾಗಲಿದೆ ಎಂದು ದಕ್ಷಿಣ ಭಾರತದ ರಾಜ್ಯಗಳಿಗೆ ಹವಾಮಾನ ಇಲಾಖೆ (Weather Department) ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಇನ್ನೂ 5 ದಿನ ಬೆಂಗಳೂರಿನಲ್ಲಿ ಚಳಿ – ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿ ತುಂತುರುಮಳೆ ಜೊತೆಗೆ ಸಾಧಾರಣ ಮಳೆ ಸಾಧ್ಯತೆ ಇದೆ. ನಿನ್ನೆಗಿಂತ ಇಂದು ಚಳಿಯ ಪ್ರಮಾಣ ಹೆಚ್ಚಾಗಿದೆ. ಇದು ಮತ್ತಷ್ಟು ಹೆಚ್ಚಾಗಬಹುದು ಅಂತ ಹವಾಮಾನ ಎಚ್ಚರಿಕೆ ನೀಡಿದೆ. ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ 12 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ನೀಡಲಾಗಿದೆ.

ರಾಜ್ಯದ ಉತ್ತರ ಭಾಗದಲ್ಲಿ ನಿನ್ನೆ ರಾತ್ರಿಯಿಂದ ಸಾಧಾರಣ ಮಳೆಯಾಗುತ್ತಿದೆ. ಮಾಂಡೋಸ್ ಚಂಡಮಾರುತವು ಪುದುಚೇರಿ ಮತ್ತು ಶ್ರೀಹರಿಕೋಟಾ ನಡುವೆ ಚೆನ್ನೈ ಕರಾವಳಿಗೆ ಅಪ್ಪಳಿಸಿದೆ. ರಾಜ್ಯದ ಕರವಾಳಿ ಭಾಗಗಳು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಚಳಿ, ಮಳೆ, ಗಾಳಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *