ವಧುವಿನ ತಾಯಿ ಜೊತೆ ವರನ ತಂದೆ ಪರಾರಿ – 16 ದಿನಗಳ ನಂತ್ರ ಮನೆಗೆ ಮರಳಿದ ಜೋಡಿ

– ಪತ್ನಿಯನ್ನು ಮನೆಗೆ ಸೇರಿಸದ ಪತಿ
– ರದ್ದಾಗಿತ್ತು ಮಕ್ಕಳ ವಿವಾಹ

ಗಾಂಧಿನಗರ: ವಧುವಿನ ತಾಯಿ ಜೊತೆ ವರನ ತಂದೆ ಪರಾರಿಯಾಗಿದ್ದು, ಈಗ ಈ ಜೋಡಿ 16 ದಿನಗಳ ನಂತರ ಮನೆಗೆ ಬಂದಿದೆ.

ಜನವರಿ 10ರಂದು ಗಣೇಶ್ (ಹೆಸರು ಬದಲಾಯಿಸಲಾಗಿದೆ) ಹಾಗೂ ವೈಜಯಂತಿ (ಹೆಸರು ಬದಲಾಯಿಸಲಾಗಿದೆ) ನಾಪತ್ತೆಯಾಗಿದ್ದರು. ಇವರಿಬ್ಬರು ಕಾಣೆಯಾಗಿದ್ದನ್ನು ನೋಡಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಇವರ ಮಕ್ಕಳ ಮದುವೆಯನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ವಧುವಿನ ತಾಯಿಯ ಜೊತೆ ವರನ ತಂದೆ ಪರಾರಿ- ಯುವ ಪ್ರೇಮಿಗಳ ಮದುವೆ ರದ್ದು

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಪಿ ಗಿರೀಶ್ ಪಾಂಡೆ, ಫೆಬ್ರವರಿಯಲ್ಲಿ ಗಣೇಶ್ ಅವರ ಮಗ ವೈಜಯಂತಿ ಅವರ ಮಗಳನ್ನು ಮದುವೆ ಆಗಬೇಕಿತ್ತು. ಆದರೆ ಜನವರಿ 10ರಂದು ಗಣೇಶ್ ಹಾಗೂ ವೈಜಯಂತಿ ಕಾಣೆಯಾಗಿದ್ದರು. ಜನವರಿ 26ರಂದು ಇವರಿಬ್ಬರು ತಮ್ಮ ತಮ್ಮ ಮನೆ ಸೇರಿದ್ದಾರೆ. 16 ದಿನಗಳ ಕಾಲ ಇಬ್ಬರು ಮಧ್ಯ ಪ್ರದೇಶದ ಉಜ್ಜೈನ್‍ನಲ್ಲಿದ್ದರು. ವಧುವಿನ ತಂದೆ ತನ್ನ ಪತ್ನಿ ವೈಜಯಂತಿಯನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಹಾಗಾಗಿ ವೈಜಯಂತಿ ತನ್ನ ತವರು ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹನಿಮೂನ್ ಮುಗಿಸಿ ಬಂದ ಮಗ್ಳ ಪತಿಯನ್ನೇ ಮದ್ವೆಯಾದ ತಾಯಿ

ಗಣೇಶ್ ಹಾಗೂ ವೈಜಯಂತಿ ಮೊದಲಿನಿಂದಲೂ ಪರಿಚಿತರಾಗಿದ್ದರು. ಇವರಿಬ್ಬರು ಕಾಣೆಯಾದ ನಂತರ ಈ ಹಿಂದೆ ಸಂಬಂಧದಲ್ಲಿದ್ದರು ಎಂದು ಅವರ ಸ್ನೇಹಿತರು ಬಹಿರಂಗಪಡಿಸಿದರು ಎಂದು ಗಣೇಶ್ ಹಾಗೂ ವೈಜಯಂತಿ ಸಂಬಂಧಿಕರು ತಿಳಿಸಿದ್ದಾರೆ. ಇದನ್ನೂ ಓದಿ: 60ರ ವೃದ್ಧೆ ಜೊತೆ 20ರ ಯುವಕನ ಮದುವೆ

ಗಣೇಶ್ ಮತ್ತು ವೈಜಯಂತಿ ಯುವಕರಾಗಿದ್ದಾಗ ಪ್ರೀತಿಸುತ್ತಿದ್ದರು. ಆದರೆ ಕಾರಣಾಂತರದಿಂದ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು. ಈಗ ಅವರ ಮಕ್ಕಳಿಂದ ಗಣೇಶ್ ಮತ್ತು ವೈಜಯಂತಿ ಮತ್ತೆ ಭೇಟಿಯಾಗಿದ್ದಾರೆ. ಮಕ್ಕಳ ಮದುವೆ ಓಡಾಟದ ಸಮಯದಲ್ಲಿ ಮತ್ತೆ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿತು. ಬಳಿಕ ಮಕ್ಕಳಿಗೆ ಗೊತ್ತಾಗದಂತೆ ಓಡಿ ಹೋಗಿದ್ದಾರೆ ಎಂದು ಶಂಕಿಸಲಾಗಿತ್ತು.

Comments

Leave a Reply

Your email address will not be published. Required fields are marked *