ಮ್ಯಾಚ್ ಬಾಕ್ಸ್, ಲೈಟರ್ ಆಯ್ತು ಈಗ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಂಡ – ವಿಡಿಯೋ ವೈರಲ್

ಮಾಸ್ಕೋ: 2018 ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯವೊಂದರ ವೇಳೆ ಸ್ಟೇಡಿಯೊಬ್ಬನಲ್ಲಿ ಕುಳಿತ್ತಿದ್ದ ಅಭಿಮಾನಿಯೊಬ್ಬ ಬೆಂಕಿ ಉಗುಳುವ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಇದುವರೆಗೂ ಮ್ಯಾಚ್ ಬಾಕ್ಸ್, ಲೈಟರ್ ನಿಂದ ಸಿಗರೇಟ್ ಹಚ್ಚಿಕೊಳ್ಳುವುದು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಈತ ತನ್ನ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಮ್ಯಾಚ್ ವೀಕ್ಷಿಸುತ್ತಾ ಕುಳಿತ ವ್ಯಕ್ತಿ ಬಾಯಿಗೆ ಸಿಗರೇಟ್ ಇಟ್ಟು ಬಳಿಕ ತನ್ನ ವಾಲೆಟ್ ಓಪನ್ ಮಾಡುತ್ತಾನೆ. ಈ ವೇಳೆ ಇದ್ದಕ್ಕಿದ್ದ ಹಾಗೇ ವಾಲೆಟ್ ನಿಂದ ಬೆಂಕಿ ಕಾಣಿಸಿಕೊಳ್ಳುತ್ತದೆ. ಬಳಿಕ ವಾಲೆಟ್ ಮುಚ್ಚುತ್ತಿದಂತೆ ಬೆಂಕಿ ಕೊನೆಗೊಳ್ಳುತ್ತದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಂದ್ಯದ ವೇಳೆ ಮೊದಲು ಈ ದೃಶ್ಯಗಳನ್ನು ಖಾಸಗಿ ಚಾನೆಲ್ ಒಂದರ ಕಾಮೆಂಟರ್ ನೋಡಿದ್ದು, ಬಳಿಕ ಎಲ್ಲರ ಗಮನ ಆತನ ಕಡೆ ಸೆಳೆದಿದೆ. ಸದ್ಯ ಈ ವಿಡಿಯೋ ನೋಡದ ಹಲವರು ಬೆಂಕಿ ಉಗುಳುವ ವಾಲೆಟ್‍ಗಾಗಿ ಹುಡುಕಾಟ ನಡೆಸಿದ್ದಾರೆ.

https://twitter.com/belziee_lovee/status/1009512278813704196?

ಸಾಧಾರಣವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್, ಫುಟ್‍ಬಾಲ್ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳು ಕ್ರೀಡಾಂಗಣವನ್ನು ಪ್ರವೇಶಿಸಬೇಕಾದರೆ ಮೊದಲು ಮೆಟಲ್ ಡಿಟೆಕ್ಟರ್ ಮೂಲಕ ಹಾದುಹೋಗಬೇಕಾಗುತ್ತದೆ. ಪಂದ್ಯಗಳಿಗೆ ಇಷ್ಟೊಂದು ಭದ್ರತೆ ಕಲ್ಪಿಸಿರುವಾಗ ವಿಶ್ವಕಪ್ ಪಂದ್ಯದ ವೇಳೆ ವಾಲೆಟ್ ತೆಗೆದುಕೊಂಡ ಹೋಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *