ಗೋವಾಕ್ಕೆ ಹೊರಟವ ಸ್ಮಶಾನಕ್ಕೆ – ಸ್ನೇಹಿತರ ಸುತ್ತ ಅನುಮಾನದ ಹುತ್ತ

ಹುಬ್ಬಳ್ಳಿ: ಗೋವಾಗೆಂದು ಹೊರಟಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ನಡೆದಿದೆ.

ಗಿರಣಿಚಾಳದ ನಿವಾಸಿ ನಾಗರಾಜ್ ಚಿಕ್ಕತುಂಬಳ ಮಗ ವಿರೇಶ್. ತಾನು ಆಯಿತು ತನ್ನ ಮನೆಯಾಯಿತೆಂದು ಇದ್ದ ವಿರೇಶ್ ಪರಲೋಕಕ್ಕೆ ಪಯಣ ಬೆಳೆಸಿದ್ದಾನೆ. ಗೆಳೆಯರ ಜೊತೆ ಸೇರಿಕೊಂಡು ಗೋವಾಕ್ಕೆ ಟ್ರೈನ್‍ನಲ್ಲಿ ಹೋಗುತ್ತಿದ್ದಾಗ, ಹುಬ್ಬಳ್ಳಿ ಬಳಿಯ ಅಮರಗೋಳದ ಬಳಿ ರೈಲ್ವೆ ಹಳಿಯ ಮೇಲೆ ಹೆಣವಾಗಿದ್ದಾನೆ.

crime

ನಡೆದಿದ್ದೇನು?
ವೀರೇಶ್ ಸಾವಿಗೂ ಮುನ್ನ ಆತನ ಸ್ನೇಹಿತರಾದ ಉದಯ್, ಕಿರಣ್ ದಿಢೀರ್ ಎಂದು ಗೋವಾಗೆ ಕರೆದಿದ್ದಾರೆ. ನಾನು ಮನೆಗೆ ಹೋಗಿ ರೆಡಿಯಾಗಿ ಬರುತ್ತೇನೆ ಎಂದರು ಕೇಳದ ಸ್ನೇಹಿತರು ಅರ್ಜೆಂಟ್ ಬಾ ಎಂದು ಅವಸರ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಗೋವಾಕ್ಕೆ ಹೋಗಿ ಬರ್ತಿನಿ ಅಂತ ಹೇಳಿಹೋದ ವಿರೇಶ್ ಉಣಕಲ್ ಸಮೀಪದ ಅಮರಗೋಳದ ರೈಲು ಹಳಿಯ ಮೇಲೆ ಹೆಣವಾಗಿ ಸಿಕ್ಕಿದ್ದಾನೆ. ಇದನ್ನೂ ಓದಿ:  ಸಿದ್ದರಾಮಯ್ಯ ಎರಡು ನಾಲಿಗೆಯ ಹಾವು ಇದ್ದಂತೆ: ಶ್ರೀರಾಮುಲು 

ಆರೋಪಿಗಳು ಪರಾರಿ
ಇತ್ತ ಜೊತೆಗೆ ಹೋದ ನಾಲ್ಕು ಜನರಲ್ಲಿ ಒಬ್ಬ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಅದಕ್ಕೆ ಆತನನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ಪರಾರಿಯಾಗಿದ್ದಾನೆ. ಇನ್ನಿಬ್ಬರು ವಿರೇಶ್ ಮೃತಪಟ್ಟ ದಿನದಿಂದಲೇ ನಾಪತ್ತೆಯಾಗಿದ್ದರು. ಇದು ಪಾಲಕರ ಅನುಮಾನಕ್ಕೆ ಕಾರಣವಾಗಿದೆ.

ಹೀಗಾಗಿ ನನ್ನ ಮಗನ ಕೊಲೆಯಾಗಿದ್ದು, ಸಾವಿನ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಿ ಎಂದು ವಿರೇಶ್ ಪಾಲಕರು ಬೇಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *