ಮಹಾರಾಣಿ ಕಾಲೇಜು ಹಾಸ್ಟೆಲ್‍ನಲ್ಲಿ ಬೆತ್ತಲೆಯಾಗಿ ಓಡಾಡಿ ಬೆಚ್ಚಿಬೀಳಿಸಿದ್ದ ಸೈಕೋ ಬಂಧನ

– ಮಹಿಳೆಯರ ಒಳ ಉಡುಪು ಕದ್ದು ಈತ ಏನು ಮಾಡ್ತಿದ್ದ ಅಂತ ಕೇಳಿದ್ರೆ ಶಾಕ್ ಆಗ್ತೀರ

ಬೆಂಗಳೂರು: ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಹುಡುಗಿಯರ ಒಳಉಡುಪು ಧರಿಸಿ ಓಡಾಡಿ ಬೆಚ್ಚಿಬೀಳಿಸಿದ್ದ ವ್ಯಕ್ತಿಯನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬು ತಾಲೀಮ್ ಎಂದು ಗುರುತಿಸಲಾಗಿದೆ. ಈತ ರೇಸ್ ಕೋರ್ಸ್‍ನಲ್ಲಿ ಕುದುರೆ ನೋಡಿಕೊಳ್ಳುವ ಕಾರ್ಮಿಕನಾಗಿದ್ದಾನೆ.

ಅಬು ತಾಲೀಮ್ ಮೂಲತಃ ಬಿಹಾರ್ ರಾಜ್ಯದವನು. 13 ವರ್ಷಗಳಿಂದ ಬಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಈತ ತನ್ನ ಅಣ್ಣನೊಟ್ಟಿಗೆ 1991ರಿಂದಲೂ ಬೆಂಗಳೂರಿನಲ್ಲಿ ನಲೆಸಿದ್ದಾನೆ. ಸಹೋದರರಿಬ್ಬರೂ ರೇಸ್‍ಕೋರ್ಸ್‍ನಲ್ಲಿ ಕುದುರೆ ತೊಳೆದು, ಅವುಗಳಿಗೆ ಹಲ್ಲು ಹಾಕಿ ಸಾಕುವ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ಅಬು ತಾಲೀಮ್ ಬಿಹಾರದಲ್ಲಿದ್ದಾಗಲೂ ರಾತ್ರಿ ವೇಳೆ ಹುಡುಗಿಯರ ಒಳ ಉಡುಪು ಕದಿಯುತ್ತಿದ್ದ ಎನ್ನಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಈ ರೀತಿ ವರ್ತಿಸುತ್ತಿದ್ದ. ನಿದ್ದೆಯಲ್ಲಿ ನಡೆದಾಡುವ ಕಾಯಿಲೆಯಿದೆ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಒಳ ಉಡುಪು ಕದ್ದು ಏನು ಮಾಡ್ತಿದ್ದ?: ಮಂಗಳಮುಖಿಯರ ಸಹವಾಸ ಜಾಸ್ತಿಯಿದ್ದ ಅಬು ತಾಲೀಮ್ ವಾರಕ್ಕೊಮ್ಮೆ ಹಾಸ್ಟೆಲ್ ಗೆ ನುಗ್ಗಿ ಹೆಣ್ಣು ಮಕ್ಕಳ ಒಳ ಉಡುಪು ಕಳ್ಳತನ ಮಾಡುತ್ತಿದ್ದ. ಬಳಿಕ ಅದನ್ನ ಅವನು ವಾಸವಿರೋ ಜಾಗಕ್ಕೆ ತೆಗೆದುಕೊಂಡು ಹೋಗ್ತಿದ್ದ. ಒಂದು ವಾರ ಆದ್ಮೇಲೆ ಎಲ್ಲಾ ಉಡುಪುಗಳನ್ನು ರಸ್ತೆಯಲ್ಲಿ ಬಿಸಾಡಿ ಹೋಗ್ತಿದ್ದ. ಮಾತ್ರವಲ್ಲದೆ ಕಳವು ಮಾಡಿದ ಬಟ್ಟೆಯಲ್ಲಿ ಹುಡುಗಿ ರೀತಿ ಬೊಂಬೆ ಮಾಡ್ತಿದ್ದ. ಎರಡೆರಡು ದಿನ ಹುಡುಗಿಯರ ಒಳುಡುಪನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದ. ಅಲ್ಲದೆ ತನ್ನ ಹೆಂಡತಿಯ ಒಳ ಉಡುಪು ಹಾಕಿಕೊಂಡು ಬರುತ್ತಿದ್ದ ಎನ್ನಲಾಗಿದೆ.

ಆರೋಪಿಯ ಹೋಲಿಕೆಗಳನ್ನಿಟ್ಟುಕೊಂಡು ಮಂಗಳವಾರ ಇಡೀ ರಾತ್ರಿ ಹೈಗ್ರೌಂಡ್ ಪೊಲೀಸರು 500ಕ್ಕೂ ಹೆಚ್ಚು ರೇಸ್ ಕೋರ್ಸ್ ಸಿಬ್ಬಂದಿಯ ವಿಚಾರಣೆ ನಡೆಸಿದ್ದರು. ಆರೋಪಿ ಅಬುತಾಲೀಮ್ ಚಂದನ್ ಷಾ ಎಂಬವರ ಕುದುರೆ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗೆ ಎರಡು ಸುಳಿ ಇದ್ದಿದ್ದರಿಂದ ಆರೋಪಿ ಪತ್ತೆ ಸುಲಭವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಅಬು ತಾಲೀಮ್ ಎರಡು ದಿನಗಳ ಹಿಂದೆ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದು ಪರಾರಿಯಾಗುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾತ್ರವಲ್ಲದೇ ಈತ ಕಿಟಕಿಯಿಂದ ಹುಡುಗಿಯರ ರೂಮಿನೊಳಗೆ ಇಣುಕಿ ನೋಡುತ್ತಿದ್ದು, ಈ ಬಗ್ಗೆ ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

https://www.youtube.com/watch?v=_yf0IfLtJFE

Comments

Leave a Reply

Your email address will not be published. Required fields are marked *