ರೈಲು ಹತ್ತುವಾಗ ಕೂಲಿ ಅರಸಿ ಮೈಸೂರಿಗೆ ಬರುತ್ತಿದ್ದ ಕಾರ್ಮಿಕನ ಕೈ ಕಟ್!

ಮೈಸೂರು: ಕೂಲಿ ಅರಸಿ ಬಂದು ರೈಲು ಹತ್ತಲು ಹೋಗಿ ಕಾರ್ಮಿಕನೋರ್ವ ಕೈ ಕಳೆದುಕೊಂಡಿರುವ ಘಟನೆ ಜಿಲ್ಲೆಯ ನಂಜನಗೂಡಿನ ಸುಜಾತಪುರಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮೂಲತಃ ಶ್ರೀರಂಗಟಪಟ್ಟಣ ತಾಲೂಕಿನ ಕಡತನಾಳು ಗ್ರಾಮದ ಪರಮೇಶ್ (30) ಕೈ ಕಳೆದುಕೊಂಡ ಕಾರ್ಮಿಕ. ಪರಮೇಶ್ ಕೂಲಿ ಅರಸಿಕೊಂಡು ಪ್ರತಿ ದಿನ ಚಾಮರಾಜನಗರದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಈ ವೇಳೆ ಸುಜಾತಪುರಂ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದು ತಮ್ಮ ಎಡಗೈಯನ್ನು ಕಳೆದುಕೊಂಡಿದ್ದಾರೆ. ಕೈ ಕಳೆದುಕೊಂಡ ನಂತರ ನೋವಿನಿಂದ ನರಳುತ್ತಿದ್ದರೂ ಸ್ಥಳೀಯರು ಸಹಾಯಕ್ಕೆ ಮುಂದಾಗಿಲ್ಲ. ಕೊನೆಗೆ ಸ್ನೇಕ್ ಬಸವರಾಜು ಎಂಬವರು ಪರಮೇಶ್‍ರನ್ನು ನಂಜನಗೂಡಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯರು ಪರಮೇಶ್ ಅವರ ತುಂಡಾದ ಕೈಯನ್ನು ಜೋಡಿಸಲು ಹರಸಾಹಸಪಡುತ್ತಿದ್ದಾರೆ. ಈ ಸಂಬಂಧ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

ಇದನ್ನೂ ಓದಿ: ರೈಲು ಸಮೀಪಿಸುತ್ತಿದ್ದಂತೆ ಟ್ರ್ಯಾಕ್ ಮೇಲೆ ಜಿಗಿದ ಮಹಿಳೆ ಕ್ಷಣ ಮಾತ್ರದಲ್ಲಿ ನಾಪತ್ತೆ! ವಿಡಿಯೋ ನೋಡಿ

ಇದನ್ನೂ ಓದಿ: ರೈಲು ಹಳಿಯಿಂದ ಶವ ತೆಗೆಯದ ರೈಲ್ವೆ ಪೊಲೀಸ್- ಶವದ ಮೇಲೆಯೇ ರೈಲುಗಳ ಓಡಾಟ

 

Comments

Leave a Reply

Your email address will not be published. Required fields are marked *