ಮಂಡ್ಯ: ನನ್ನ ಸಾವಿಗೆ ನನ್ನ ಯಜಮಾನರೆ ಕಾರಣ ಎಂದು ಲಾಡ್ಜ್ ಮಾಲೀಕನ ವಿರುದ್ಧ ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ, ಮದ್ದೂರು ಪಟ್ಟಣದ ಸಮೀಪ ಶಿವಪುರದಲ್ಲಿ ನಡೆದಿದೆ.
40 ವರ್ಷದ ಮನು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶಿವಪುರದಲ್ಲಿರುವ ನೈದಿಲೆ ಲಾಡ್ಜ್ ಅನ್ನು ಮನು ನಡೆಸುತ್ತಿದ್ದರು. ನೈದಿಲೆ ಲಾಡ್ಜ್ ಮಾಲೀಕರಿಂದ ಸಂಪೂರ್ಣ ಲಾಡ್ಜ್ ಬಾಡಿಗೆ ಪಡೆದಿದ್ದ ಮನು ಅದರ ಉಸ್ತುವಾರಿ ತಾವೇ ನೋಡಿಕೊಳ್ಳುತ್ತಿದ್ದರು. ವ್ಯವಹಾರದಲ್ಲಿ ನಷ್ಟವಾಗಿದ್ದು, ನನ್ನ ಸಾವಿಗೆ ಲಾಡ್ಜ್ ಮಾಲೀಕರೇ ಕಾರಣ ಎಂದು ಮನು ಡೆತ್ ನೋಟ್ ಬರೆದಿಟ್ಟು, ಲಾಡ್ಜ್‌ನಲ್ಲೇ ನೇಣಿಗೆ ಶರಣಾಗಿದ್ದಾನೆ.
ಡೆತ್‍ನೋಟ್ ಅಲ್ಲಿ ಏನಿತ್ತು?
ಅಡ್ವಾನ್ಸ್ ಸೇರಿದಂತೆ ಇನ್ನಿತರ ಹಣ ಲಾಡ್ಜ್ ಮಾಲೀಕನಿಂದ ನನಗೆ ಬರಬೇಕು. ಆದ್ದರಿಂದ ಆ ಹಣ ವಸೂಲಿ ಮಾಡಿ ನನ್ನ ತಾಯಿಗೆ ತಲುಪಿಸಿ. ಅಲ್ಲಿಯವರೆಗೂ ಲಾಡ್ಜ್ ಓಪನ್ ಮಾಡಲು ಬಿಡಬೇಡಿ ಎಂದು ಮನು ತನ್ನ ಸ್ನೇಹಿತರಿಗೆ ಡೆತ್‍ನೋಟ್‍ನಲ್ಲಿ ಮನವಿ ಮಾಡಿದ್ದಾನೆ. ಈ ಘಟನೆ ಸಂಬಂಧ ಮದ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply