ಬೆನ್ನಲ್ಲೇ ಶವರ್, ಬಸ್ ನಿಲ್ದಾಣದಲ್ಲೇ ಸ್ನಾನ ಮಾಡ್ದ! ವಿಡಿಯೋ ನೋಡಿ

ಬೀಜಿಂಗ್: ಬೇಸಿಗೆ ಕಾಲದಲ್ಲಿ ಹೊರಗಡೆ ಎಲ್ಲಾದ್ರೂ ಹೋದಾಗ ಬಾಯಾರಿಕೆ ಆಗಬಹುದು ಅಂತ ಜೊತೆಯಲ್ಲೊಂದು ನೀರಿನ ಬಾಟಲಿ ಇಟ್ಟುಳ್ಳೋದು ಕಾಮನ್. ಹಾಗೇ ಬಿರುಬಿಸಿಲಿನಲ್ಲಿ ಓಡಾಡುವಾಗ ತಣ್ಣಿರನ್ನ ಮೈಮೇಲೆ ಸುರಿದುಕೊಳ್ಳಬೇಕು ಅನ್ನಿಸುತ್ತೆ. ನಾವು ಯಾವುದೇ ಜಾಗದಲ್ಲಿದ್ದರೂ ಬಾಟಲಿಯಲ್ಲಿರೋ ನೀರನ್ನ ತೆಗೆದು ಕುಡಿಯಬಹುದು. ಆದ್ರೆ ಎಲ್ಲೆಂದ್ರಲ್ಲಿ ಮೈ ಮೇಲೆ ನೀರು ಸುರಿದುಕೊಳ್ಳೋಕಾಗುತ್ತಾ? ಅದೂ ಬಸ್ ಸ್ಟಾಪ್‍ನಲ್ಲಿ?

ಇಲ್ಲೊಬ್ಬ ವ್ಯಕ್ತಿ ಬಿಸಿಲಿನ ಬೇಗೆಯಿಂದ ಕೂಲ್ ಆಗೋಕೆ ಬ್ಯಾಕ್‍ಪ್ಯಾಕ್‍ನಂತೆ ಶವರ್ ಜೊತೆಯಲ್ಲಿಟ್ಟುಕೊಂಡಿದ್ದು ಬಸ್ ನಿಲ್ದಾಣದಲ್ಲೇ ಸ್ನಾನ ಮಾಡಿದ್ದಾನೆ.

ಅಯ್ಯೋ ಇದೇನಪ್ಪಾ ಬಸ್ ನಿಲ್ದಾಣದಲ್ಲಿ ಸ್ನಾನ ಮಾಡ್ತಿದ್ದಾನೆ ಅಂತ ನೋಡುಗರು ಅಚ್ಚರಿಪಟ್ಟಿದ್ದು, ಕೆಲವರು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಚೀನಾದ ಚಾಂಗ್‍ಕಿಂಗ್‍ನಲ್ಲಿ ಇದೇ ತಿಂಗಳು ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ.

ಆ ವ್ಯಕ್ತಿ ಬೆನ್ನಿಗೆ ಶವರ್ ಬ್ಯಾಕ್‍ಪ್ಯಾಕ್ ನೇತುಹಾಕಿಕೊಂಡಿದ್ದು ಪಕ್ಕದಲ್ಲಿರೋ ಹ್ಯಾಂಡಲ್‍ನಿಂದ ಪಂಪ್ ಮಾಡಿದ್ರೆ ತಲೆ ಮೇಲೆ ನೀರು ಸುರಿಯೋದನ್ನ ವಿಡಿಯೋದಲ್ಲಿ ಕಾಣಬಹುದು. ಬಹುಶಃ ಈತ ಕ್ರಿಮಿನಾಶಕ ಸಿಂಪಡಿಸೋ ಸ್ಪ್ರೇಯರ್ ಮಾರ್ಪಾಡು ಮಾಡಿ ಈ ಶವರ್ ಬ್ಯಾಕ್‍ಪ್ಯಾಕ್ ತಯಾರಿಸಿಕೊಂಡಿರಬಹುದು ಎನ್ನಲಾಗಿದೆ.

ಈ ತಿಂಗಳು ಚಾಂಗ್‍ಕಿಂಗ್‍ನಲ್ಲಿ ಉಷ್ಣಾಂಶ 100 ಡಿಗ್ರಿ ದಾಟಿದೆ ಎಂದು ವರದಿಯಾಗಿದೆ.

https://www.youtube.com/watch?v=SO5TV7GyRyQ

Comments

Leave a Reply

Your email address will not be published. Required fields are marked *