ಪತ್ನಿಯ ವಿಚ್ಛೇದನದಿಂದ ಕೋಪಗೊಂಡ ಪತಿ – ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ

– 22 ಜನರಿಗೆ ಉಸಿರಾಟದ ಸಮಸ್ಯೆ, 129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ

ಸಿಯೋಲ್: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡ ಪತಿ ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮಾಡಿದ ಘಟನೆ ದಕ್ಷಿಣ ಕೊರಿಯಾದ (South Korea) ಸಿಯೋಲ್‌ನಲ್ಲಿ (Seoul) ನಡೆದಿದೆ.

ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ವಾನ್ (67) ಎಂದು ಗುರುತಿಸಲಾಗಿದೆ. ಪತ್ನಿ ವಿಚ್ಛೇದನ ಕೊಟ್ಟ ಕೋಪದಲ್ಲಿಯೇ ಪತಿ ಯೆಯೋಯಿನಾರು ನಿಲ್ದಾಣದಿಂದ ಮಾಪೋ ನಿಲ್ದಾಣಕ್ಕೆ ತೆರಳುವ ರೈಲಿಗೆ ಹತ್ತಿದ್ದ. ಜೊತೆಗೆ ಬೆಂಕಿ ಹಚ್ಚುವ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದ. ಬೆಳಿಗ್ಗೆ 8:42ರ ಸುಮಾರಿಗೆ ರೈಲು ಹಾನ್ ನದಿಯ ಕೆಳಗಿರುವ ಸಿಯೋಲ್ ಸುರಂಗ ಮಾರ್ಗ ೫ರಲ್ಲಿ ಚಲಿಸುತ್ತಿದ್ದಂತೆಯೇ ದಿಢೀರನೇ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹತ್ತುತ್ತಲೇ ತನ್ನ ಬಟ್ಟೆಗೂ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರ ಪರಿಣಾಮ ರೈಲಿನಲ್ಲಿದ್ದ ೨೨ ಜನರು ಉಸಿರಾಟದ ಸಮಸ್ಯೆಯಾಗಿದೆ. ಉಸಿರಾಟದ ಸಮಸ್ಯೆಯಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ದಾವಣಗೆರೆ | ವಂದೇ ಭಾರತ್‌ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ

129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ವಾನ್‌ನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ರೈಲಿಗೆ ಸುಮಾರು 330 ಮಿಲಿಯನ್‌ನಷ್ಟು (33 ಕೋಟಿ ರೂ.) ಹಾನಿಯಾಗಿದೆ ಎಂದು ಮೂಲಗಳು ತಿಳಿಸಿದೆ.

ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಯತ್ನ ಹಾಗೂ ರೈಲ್ವೆ ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ದಾರುಣ ಸಾವು – ಸ್ಫೋಟಕ ರಹಸ್ಯ ಬಿಚ್ಚಿಟ್ಟ ಆ ಪತ್ರ