ಸುಮ್ಮನಿರು ಎಂದಿದ್ದಕ್ಕೆ ಲಾಕಪ್‍ನಲ್ಲೇ ಬಟ್ಟೆ ಬಿಚ್ಚಿದ ಆರೋಪಿ

ಗಾಂಧಿನಗರ: ಸುಮ್ಮನಿರು ಎಂದಿದ್ದಕ್ಕೆ ಪೊಲೀಸ್ ಲಾಕಪ್‍ನಲ್ಲೇ ಆರೋಪಿ ಬಟ್ಟೆ ಬಿಚ್ಚಿ ನಿಂತು ಅಶ್ಲೀಲ ಮಾತುಗಳನ್ನಾಡಿರುವ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.

ಸುರೇಶ್ ನಂದ್‍ವಾನಿ (55) ಪೊಲೀಸ್ ಸ್ಟೇಷನ್ ಒಳಗಡೆಯೇ ಬಟ್ಟೆ ಬಿಚ್ಚಿ ನಿಂತಿದ್ದಾನೆ. ತಲೋದರಾ ಗ್ರಾಮದ ನಿವಾಸಿಯಾಗಿದ್ದು, ಈತ ಏಕಾಏಕಿ ತನ್ನ ಬಟ್ಟೆಯನ್ನೆಲ್ಲ ಕಳಚಿ ನಿಂತು, ಮಹಿಳಾ ಪೊಲೀಸ್ ಸಿಬ್ಬಂದಿಯ ಜತೆ ಅಶ್ಲೀಲವಾಗಿ ವರ್ತಿಸಿದ್ದಾನೆ.

ಸುರೇಶ್ ನಂದ್‍ವಾನಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದನು. ಈತನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಈತನನ್ನು ಶುಕ್ರವಾರ ಬಂಧಿಸಲಾಗಿತ್ತು. ಬಂಧಿಸಿ ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಕಬಿನಿ ಫಾರೆಸ್ಟ್‌ನಲ್ಲಿ ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

ಲಾಕಪ್‍ನಲ್ಲಿದ್ದ ಆರೋಪಿ ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದನು. ಅದನ್ನು ನೋಡಿದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಸುಮ್ಮನೆ ಇರುವಂತೆ ಹೇಳಿದರು. ಆದರೆ ಸುಮ್ಮನೆ ಇರುವುದನ್ನು ಬಿಟ್ಟು, ತನ್ನ ಬಟ್ಟೆಯನ್ನೆಲ್ಲ ಕಳಚಿ ಹಾಕಿ, ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಜಿ.ಪರಮೇಶ್ವರ್

ಅದನ್ನು ನೋಡಿದ ಸ್ಟೇಶನ್ ಸಿಬ್ಬಂದಿ ಬಟ್ಟೆ ಹಾಕಿಕೊಳ್ಳುವಂತೆ ಅವನಿಗೆ ಹೇಳಿದರೂ ಕೇಳದೆ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದಾನೆ. ಆಗ ಠಾಣಾಧಿಕಾರಿ ಎಂ.ವಿ.ಕಿಕಾನಿ ಮತ್ತು ಸಿಬ್ಬಂದಿ ಲಾಕ್‍ಅಪ್ ಒಳಗೇ ಹೋಗಿ ಆರೋಪಿಯನ್ನು ಗದರಿಸಿದ್ದಾರೆ. ನಂತರ ಅವನು ಬಟ್ಟೆಯನ್ನು ಹಾಕಿಕೊಂಡಿದ್ದಾನೆ. ಈಗ ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ಕೂಡ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *