ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ಹೋಗಿ ಮೃತಪಟ್ಟ ವ್ಯಕ್ತಿ

ಡೋಡೋಮಾ: ವ್ಯಕ್ತಿಯೊಬ್ಬ ಅಂಡರ್‌ವಾಟರ್‌ನಲ್ಲಿ ಗೆಳತಿಗೆ ಪ್ರಪೋಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಆಫ್ರಿಕಾದಲ್ಲಿ ನಡೆದಿದೆ.

ಸ್ಟೀವ್ ವೆಬ್ಬರ್ ಮೃತಪಟ್ಟ ವ್ಯಕ್ತಿ. ಸ್ಟೀವ್ ವೆಬ್ಬರ್ ಗೆಳತಿ ಕೆನೆಶಾ ಆಂಟೊಯಿನ್ ಜೊತೆ ಟಾಂಜಾನಿಯಾದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು. ಈ ವೇಳೆ ಸ್ಟೀವ್ ಅಂಡರ್‌ವಾಟರ್‌ನಲ್ಲಿ ಗೆಳತಿಯನ್ನು ಪ್ರಪೋಸ್ ಮಾಡಲು ನಿರ್ಧರಿಸುತ್ತಾನೆ.

ಸಮುದ್ರಕ್ಕೆ ಜಿಗಿದ ಸ್ಟೀವ್ ಸಬ್‍ಮರ್ಜ್ಡ್ ಕ್ಯಾಬಿನ್ ಮೂಲಕ ತನ್ನ ಗೆಳತಿಗೆ ಪ್ರೇಮ ಪತ್ರವನ್ನು ಹಾಗೂ ಉಂಗುರವನ್ನು ತೋರಿಸುತ್ತಾನೆ. ಆ ಪತ್ರದಲ್ಲಿ ನೀನು ನನ್ನ ಪತ್ನಿ ಆಗುತ್ತೀಯಾ? ಎಂದು ಸ್ಟೀವ್ ಬರೆದಿದ್ದನು. ಈ ಪತ್ರ ತೋರಿಸಿದ ನಂತರ ಸ್ಟೀವ್ ಮತ್ತೆ ಮೇಲೆ ಬರಲಿಲ್ಲ ಎಂದು ಕೆನೆಶಾ ತಿಳಿಸಿದ್ದಾಳೆ.

ಸ್ಟೀವ್ ಪ್ರಪೋಸ್ ಮಾಡಿದ ವಿಡಿಯೋವನ್ನು ಕೆನೆಶಾ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅದಕ್ಕೆ ಎಸ್. ಎಸ್. ಎಸ್. ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಲ್ಲದೆ ನಮ್ಮ ಜೀವನದ ಅತ್ಯುತ್ತಮ ದಿನವನ್ನು ನಾವು ಎಂದಿಗೂ ಆಚರಿಸಿಕೊಳ್ಳಲು ಆಗಲಿಲ್ಲ. ನಮ್ಮ ಜೀವನದ ಅದ್ಭುತ ದಿನ ಕೆಟ್ಟ ದಿನವಾಗಿ ಬದಲಾಗಿದೆ. ನೀನು ಆ ಆಳದಿಂದ ಹೊರ ಬರಲಿಲ್ಲ. ಹಾಗಾಗಿ ನೀನು ಎಂದಿಗೂ ನನ್ನ ಉತ್ತರವನ್ನು ಕೇಳಲು ಆಗಲೇ ಇಲ್ಲ. ಹೌದು. ಹೌದು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

ಕೆನೆಶಾ ತನ್ನ ಭಾವನಾತ್ಮಕ ಪೋಸ್ಟ್ ನಲ್ಲಿ ಸ್ಟೀವ್‍ಗೆ ಗೌರವ ಸಲ್ಲಿಸಿದ್ದಾಳೆ. ಅಲ್ಲದೆ, “ಕಳೆದ ಕೆಲವು ದಿನಗಳಲ್ಲಿ ನಾವು ಅತ್ಯಂತ ಅದ್ಭುತವಾದ ಅನುಭವಗಳನ್ನು ಅನುಭವಿಸಿದ್ದೇವೆ. ನಾವಿಬ್ಬರು ತುಂಬಾ ಸಂತೋಷದಿಂದ ನಮ್ಮ ಅಂತಿಮ ಕ್ಷಣಗಳನ್ನು ಉತ್ಸಾಹದಿಂದ ಕಳೆದಿದ್ದೇವೆ. ಆ ನೆನಪುಗಳಿಂದ ನಾನು ಸಾಂತ್ವನ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾಳೆ.

Comments

Leave a Reply

Your email address will not be published. Required fields are marked *