ಆಟೋವನ್ನೇ ಅಂಬುಲೆನ್ಸ್ ಮಾಡಿ ಬಡ ಜನರಿಗೆ ಉಚಿತವಾಗಿ ಸೇವೆ

– ಬಂದ ಲಾಭವನ್ನು ಚಾಲಕನಿಂದ ಅನಾಥಾಶ್ರಮಕ್ಕೆ ದಾನ

ಬೆಳಗಾವಿ: ಕಳೆದ ಮೂರು ವರ್ಷಗಳಿಂದ ಆಟೋವನ್ನೇ ಅಂಬುಲೆನ್ಸ್ ಮಾಡಿಕೊಂಡು ಸಾರ್ವಜನಿಕರ ಸಹಾಯಕ್ಕೆ ಆಟೋ ಚಾಲಕರೊಬ್ಬರು ಟೊಂಕಕಟ್ಟಿ ನಿಂತಿದ್ದಾರೆ.

ಮಂಜುನಾಥ ಪೂಜಾರಿ ರಾತ್ರಿಯ ಅಂಬುಲೆನ್ಸ್ ಮನುಷ್ಯ ಎಂದು ದಾಖಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ವೀರೇಶ ಕಿವಡಸಣ್ಣವರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಪೂಜಾರಿ, 2004ರಲ್ಲಿ ರಸ್ತೆಯ ಅಪಘಾತದಲ್ಲಿ ನಾನು ಅಸ್ವಸ್ಥನಾಗಿ ನನ್ನ ಕಾಲುಗಳು ಮೂರು ತುಂಡಾಗಿತ್ತು. ಹಾಗಾಗಿ ಜನರ ರಕ್ಷಣೆಗಾಗಿ ಸ್ವತಃ ನಾನು ನನ್ನ ಆಟೋವನ್ನೇ ಅಂಬುಲೆನ್ಸ್ ಮಾಡಿ ಬಡ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

ಬೆಳಗ್ಗಿನ ಸಮಯದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ರಾತ್ರಿಯ ಸಮಯದಲ್ಲಿ ಬಡವರಿಗಾಗಿ ಆಟೋ ಅಂಬುಲೆನ್ಸ್ ಸೇವೆ ನೀಡುತ್ತಿದ್ದೇನೆ. ಈ ಅಂಬುಲೆನ್ಸ್ ನಿಂದ ಬಂದ ಲಾಭವನ್ನು ನಾನು ಅನಾಥ ಆಶ್ರಮಕ್ಕೆ ನೀಡುತ್ತೇನೆ ಎಂದು ಮಂಜುನಾಥ್ ತಿಳಿಸಿದರು.

ಇದೇ ವೇಳೆ ನಾಗರತ್ನಾ, ನಿಂಗಪ್ಪ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *