ಪತಿ ವಿರುದ್ಧ ದೂರು- ಪತ್ನಿಗೆ ಕೋರ್ಟ್ ಆವರಣದಲ್ಲೇ ಆ್ಯಸಿಡ್ ಎರಚಿದ

ಚೆನ್ನೈ: ನ್ಯಾಯಾಲಯದ (Court) ಆವರಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ (Wife) ಆ್ಯಸಿಡ್ (Acid) ಎರಚಿದ ಘಟನೆ ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ (Coimbatore) ನಡೆದಿದೆ.

ಶಿವಕುಮಾರ್ ಬಂಧಿತ ಆರೋಪಿ. ಶಿವಕುಮಾರ್ ವಿರುದ್ಧ ಆತನ ಪತ್ನಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನ್ಯಾಯಾಲಯಕ್ಕೆ ಆಗಮಿಸಿದ್ದಳು. ಈ ವೇಳೆ ಶಿವಕುಮಾರ್ ಸಹ ಕೋರ್ಟ್‍ಗೆ ಹಾಜರಾಗಿದ್ದ. ಅಷ್ಟೇ ಅಲ್ಲದೇ ನೀರಿನ ಬಾಟಲಿಯಲ್ಲಿ ಆ್ಯಸಿಡ್ ತೆಗೆದುಕೊಂಡಿದ್ದ. ಅದಾದ ಬಳಿಕ ಪತ್ನಿ ಕಾಣುತ್ತಿದ್ದಂತೆ ಏಕಾಏಕಿ ಶಿವಕುಮಾರ್ ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಅಲ್ಲಿದ್ದ ವಕೀಲರು ಶಿವಕುಮಾರ್‌ನನ್ನು ಹಿಡಿದು ಥಳಿಸಿದ್ದಾರೆ. ಅದಾದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ವೇಳೆ ಆರೋಪಿಯ ಪತ್ನಿ ಹಾಗೂ ಇಬ್ಬರು ವಕೀಲರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನೆಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: RBI ಹೆಸರಲ್ಲಿ ಲಕ್ಷ ಲಕ್ಷ ಹಣ ವಂಚನೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

Comments

Leave a Reply

Your email address will not be published. Required fields are marked *