ಗಗನಸಖಿಯಾಗಬಯಸಿದ್ದ ಯುವತಿಯನ್ನ ಹಾಡಹಗಲೇ ಚಾಕುವಿನಿಂದ ಇರಿದು ಕೊಂದ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನವದೆಹಲಿ: ಯುವಕನೊಬ್ಬ 21 ವರ್ಷದ ಯುವತಿಯನ್ನು ಹಾಡಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿನ ಮನ್‍ಸರೋವರ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಗನಸಖಿ ಆಗಬೇಕೆಂಬ ಕನಸು ಹೊಂದಿದ್ದ ಯುವತಿ, ಅದಕ್ಕಾಗಿ ತರಬೇತಿ ಪಡೆಯುತ್ತಿದ್ದಳು ಎಂದು ವರದಿಯಾಗಿದೆ. ಆದ್ರೆ ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ. ಯುವತಿಗೆ ಪರಿಚಯವಿದ್ದ ಆದಿಲ್ ಎಂಬಾತ ಈ ಕೃತ್ಯವೆಸಗಿದ್ದಾನೆ.

ಬುಧವಾರ ಸಂಜೆ ಸಮಾರು 5.30ರ ವೇಳೆಯಲ್ಲಿ ಯುವತಿ ಮನೆಯ ಹೊರಗಡೆ ಅಂಗಡಿಯಲ್ಲಿ ವಸ್ತುಗಳನ್ನ ಕೊಳ್ಳಲು ಹೋಗಿದ್ದಾಳೆ. ಈ ವೇಳೆ ಆದಿಲ್ ಅಲ್ಲಿಗೆ ಬಂದಿದ್ದು ಇಬ್ಬರ ನಡುವೆ ವಾದ ನಡೆದಿದೆ. ಇದ್ದಕ್ಕಿದ್ದಂತೆ ಆದಿಲ್ ಚಾಕು ತೆಗೆದು ಯುವತಿಗೆ ಹಲವು ಬಾರಿ ಇರಿದಿದ್ದಾನೆ. ಯುವತಿ ಆತನಿಂದ ಪಾರಾಗಲು ಅಂಗಡಿಯೊಳಗೆ ಹೋಗಲು ಯತ್ನಿಸಿದ್ರೂ ಕೂಡ ಆದಿಲ್ ಆಕೆಯ ಮೇಲೆ ದಾಳಿ ಮಾಡಿ ಇರಿದಿದ್ದು, ಸ್ಥಳೀಯರು ಆತನನ್ನು ಹಿಡಿಯುವ ಮೊದಲೇ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಬಗ್ಗೆ ಯುವತಿಯ ಪೋಷಕರು ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಯುವತಿಯನ್ನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೇ ಯುವತಿ ಇಂದು ಸಾವನ್ನಪ್ಪಿದ್ದಾಳೆ.

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆದಿಲ್‍ನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆದಿಲ್‍ನನ್ನು ಈ ಹಿಂದೆ ಪೊಲೀಸರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು ಎಂದು ವರದಿಯಾಗಿದೆ.

ಆದಿಲ್ ಯುವತಿಯನ್ನ ಪ್ರೀಸುತ್ತಿದ್ದ. ಇದು ಒನ್ ಸೈಡೆಡ್ ಲವ್ ಆಗಿದ್ದು, ಇದೇ ಕೊಲೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

https://www.youtube.com/watch?v=FdEObBEvwVY

 

Comments

Leave a Reply

Your email address will not be published. Required fields are marked *