ಟ್ಯಾಟೂಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಭೂಪ

ಲಂಡನ್: ವಿದೇಶಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್. 25 ರಿಂದ 39 ವಯಸ್ಸಿನ ಶೇ.30ರಷ್ಟು ಜನರು ಸಾಮನ್ಯವಾಗಿ ಒಂದೆರೆಡು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಎಂದು ದತ್ತಾಂಶಗಳು ಹೇಳುತ್ತವೆ. ಕ್ರಿಸ್ ಡಾಲ್ಜೆಲ್ಲ್ ಎಂಬಾತ ಟ್ಯಾಟೂ ಹಾಕಿಸಿಕೊಳ್ಳುವುದಕ್ಕಾಗಿ 28,000 (27 ಲಕ್ಷ ರೂ.) ಖರ್ಚು ಮಾಡಿದ್ದಾರೆ.

33 ವರ್ಷದ ಕ್ರಿಸ್ ಇದೂವರೆಗೂ 600 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ಅಂದರೆ ಒಂದೇ ಸಾರಿ ಎಲ್ಲ ಟ್ಯಾಟೂ ಹಾಕಿಕೊಂಡಿಲ್ಲ. ತಮ್ಮ 16ನೇಯ ವಯಸ್ಸಿನಿಂದ ಇಂದಿನವರೆಗೂ ಮುಖ, ಕಣ್ಣು, ತಲೆ ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ಭಿನ್ನ ಭಿನ್ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈಗಾಗಲೇ ಟ್ಯಾಟೂ ಸಂಖ್ಯೆ 600ಕ್ಕೂ ತಲುಪಿದರೂ, ಮುಂದಿನ ವಾರ ಮತ್ತೊಂದು ಹಚ್ಚೆ ಹಾಕಿಸಿಕೊಳ್ಳಲಿದ್ದೇನೆ ಅಂತಾ ಕ್ರಿಸ್ ಹೇಳಿದ್ದಾರೆ.

ಬಾಣಸಿಗನಾಗಿ ಕೆಲಸ ಮಾಡಿಕೊಂಡಿರುವ ಕ್ರಿಸ್‍ಗೆ ಇಡೀ ದೇಹವನ್ನು ಟ್ಯಾಟೂಗಳಿಂದ ಮುಚ್ಚಬೇಕು ಎಂಬ ಆಸೆ. ದೇಹದಲ್ಲಿ ಚರ್ಮ ಖಾಲಿಯಾಗಿ ಉಳಿದುಕೊಂಡಿದ್ದನ್ನು ಕಂಡ ಕೂಡಲೇ ವಿಭಿನ್ನ ಟ್ಯಾಟೂ ಹಾಕಿಕೊಳ್ಳುವುದರ ಕುರಿತು ಆಲೋಚಿಸುತ್ತಾರಂತೆ.

ಜನರು ನನ್ನ ಟ್ಯಾಟೂಗಳನ್ನು ನೋಡಿ ಏನು ಅಂದುಕೊಳ್ಳುತ್ತಾರೆ ಎಂಬ ಚಿಂತೆ ನನಗಿಲ್ಲ. ದೇಹದ ತುಂಬ ಟ್ಯಾಟೂ ಹಾಕಿಸಿಕೊಳ್ಳುವುದು ನನ್ನ ಆಸೆ. ರಸ್ತೆಯಲ್ಲಿ ನಾನು ನಡೆದು ಹೋಗುವಾಗ ಜನರು, ಏ.. ಅವನ ಮುಖದ ಮೇಲಿನ ಟ್ಯಾಟೂ ನೋಡು ಅಂತಾ ಟೀಕೆ ಟಿಪ್ಪಣಿಗಳನ್ನು ಮಾಡಲು ಆರಂಭಿಸುತ್ತಾರೆ. ಕಣ್ಣಿನ ರಪ್ಪೆಗಳ ಮೇಲೆ ಹಚ್ಚೆ ಹಾಕಿಸಿಕೊಂಡಾಗ ಮೂರು ದಿನ ನಾನು ಅಂಧನಾಗಿ ಬದುಕಿದ್ದೇನೆ. ಟ್ಯಾಟೂ ಹಾಕಿಸಿಕೊಳ್ಳುವಾಗಿನ ನೋವು ಏನು ಎಂಬುದರ ನನಗೆ ಮಾತ್ರ ಗೊತ್ತು. ಹಾಗಾಗಿ ಜನರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕ್ರಿಸ್ ಹೇಳುತ್ತಾರೆ.

ಮುಂದೆ ನನ್ನ ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ನನ್ನ ಟ್ಯಾಟೂಗಳಿಂದ ತೊಂದರೆಯಾದ್ರೆ, ಎಲ್ಲ ಹಚ್ಚೆಗಳನ್ನು ಲೇಸರ್ ಚಿಕಿತ್ಸೆಯಿಂದ ತೆಗೆದುಕೊಳ್ಳುತ್ತೇನೆ ಎಂದು ಕ್ರಿಸ್ ಹೇಳಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *