ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರದಲ್ಲಿ ಗನ್ ಹಿಡಿದು ರೌಡಿಸಂ

ರಾಮನಗರ: ಶಿವರಾತ್ರಿ ಹಬ್ಬದಂದು ಸಿಎಂ ಸ್ವಕ್ಷೇತ್ರದಲ್ಲಿ ಹಾಡಹಾಗಲೇ ದುಷ್ಕರ್ಮಿಯೊಬ್ಬ ಕಾರಿನಲ್ಲಿ ಗನ್ ಹಿಡಿದು ಹೆದ್ದಾರಿಯ ರಸ್ತೆಯುದ್ದಕ್ಕೂ ಪುಂಡಾಟಿಕೆ ನಡೆಸಿದ ಘಟನೆ ನಡೆದಿದೆ.

ಬೆಂಗಳೂರು – ಮೈಸೂರು ಹೆದ್ದಾರಿಯ ಚನ್ನಪಟ್ಟಣ್ಣದಿಂದ ರಾಮನಗರ ತನಕ ಹೆದ್ದಾರಿಯಲ್ಲಿ ಕಾರ್ ಹೊರಗಡೆ ಗನ್ ತೋರಿಸುತ್ತಲೇ ಪ್ರಯಾಣ ಮಾಡಿದ್ದಾನೆ. ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಗನ್ ಹಿಡಿದು ಆರ್ಭಟಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

KA02 Z7031 ನಂಬರ್‍ನ ಮಾರುತಿ ಎಸ್ಟೀಮ್ ಕಾರಿನಲ್ಲಿ ಪುಂಡ ತನ್ನ ಶೋ ಆಫ್ ಕೊಟ್ಟಿದ್ದಾನೆ. ರಾಮನಗರ ಹೊರವಲಯದ ಪಂಜಾಬಿ ಗಾರ್ಡನ್ ಡಾಬಾ ಬಳಿಯಿಂದ ರಾಮನಗರದ ತನಕ ಗನ್ ಹಿಡಿದು ಪ್ರಯಾಣಿಸಿದ್ದಾನೆ. ಕಾರು ಬೆಂಗಳೂರಿನ ದಕ್ಷಿಣ ವಲಯಕ್ಕೆ ಸೇರಿದ್ದಾಗಿದ್ದು, ಹಾಡ ಹಾಗಲೇ ಈ ರೀತಿ ಗನ್ ಹಿಡಿದು ಸಾರ್ವಜನಿಕವಾಗಿ ಓಡಾಟ ನಡೆಸಿದ್ದಾನೆ.

ಸಿಎಂ ಕುಮಾರಸ್ವಾಮಿ ಅವರ ಸ್ವಕ್ಷೇತ್ರದಲ್ಲಿಯೇ ಈ ರೀತಿ ಪ್ರದರ್ಶನ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಪೊಲೀಸ್ ಇಲಾಖೆ ಮೇಲೆ ಪುಂಡರಿಗೆ ಭಯವೇ ಇಲ್ಲದಂತಾಗಿರುವುದು ಪದೇ ಪದೇ ಸಾಬೀತಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *