ಮನೆಯ ಬಾಗಿಲು ಬಡಿದು ಏಕಾಏಕಿ ಮಹಿಳೆಯ ಮೇಲೆ ಕೈ ಹಾಕ್ದ- ಬೆಡ್‍ರೂಂಗೆ ಎಳೆದುಕೊಂಡು ಹೋಗಿ ರೇಪ್

ಬೆಂಗಳೂರು: ವ್ಯಕ್ತಿಯೊಬ್ಬ ಒಂಟಿ ಮಹಿಳೆಯೊಬ್ಬರ ಮನೆ ಬಾಗಿಲು ಬಡಿದು ಒಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಬಗಲಕುಂಟೆಯಲ್ಲಿ ನಡೆದಿದೆ.

ನಾಗರಾಜ್ ಅತ್ಯಾಚಾರ ಎಸಗಿದ ಕಾಮುಕ. ನಾಗರಾಜ್ ಕೆಲಸದಲ್ಲಿ ಆಟೋ ಡ್ರೈವರ್ ಆಗಿದ್ದಾನೆ. ನಗರದ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದ ಹಳ್ಳಿಯಲ್ಲಿ ಒಂಟಿ ಮಹಿಳೆ ಮನೆಗೆ ನುಗ್ಗಿ ಆಕೆಯ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದಾನೆ.

ಕಳೆದ 16ರಂದು ಸುಮಾರು 30 ವರ್ಷದ ಮಹಿಳೆಯೊಬ್ಬರು, ಮನೆಯಲ್ಲಿ ಒಂಟಿಯಾಗಿದ್ದು ಸುಮಾರು ಎರಡು ಗಂಟೆಗೆ ಮನೆ ಬಳಿ ಬಂದ ನಾಗರಾಜ್ ಮನೆ ಬಾಗಿಲು ಬಡಿದಿದ್ದಾನೆ. ಒಳಗಿದ್ದ ಮಹಿಳೆ ಯಾರೋ ಪರಿಚಿತರು ಇರಬೇಕೆಂದು ಬಾಗಿಲು ತೆಗೆದಿದ್ದಾಳೆ. ಅಷ್ಟರಲ್ಲಿ ಆ ವ್ಯಕ್ತಿ ಏಕಾಏಕಿ ಮಹಿಳೆಯ ಮೇಲೆ ಕೈ ಹಾಕಿದ, ಬೆಡ್ ರೂಮ್ ಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ.

ಕಾಮುಕನಿಂದ ತಪ್ಪಿಸಿಕೊಳ್ಳಲು ಮಹಿಳೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಳು. ಆದರ ವಿರೋಧ ವ್ಯಕ್ತಪಡಿಸಿದ ಮಹಿಳೆಗೆ ನಾಗರಾಜ್ ಕೈಗೆ ಸಿಕ್ಕ ವಸ್ತುಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಜೀವ ಉಳಿಸಿಕೊಳ್ಳುವುದಕ್ಕೆ ಮನೆಯ ಮೂಲೆಯಲ್ಲಿದ್ದ ಬಾತ್ ರೂಮ್ ಒಳಗೆ ಬಾಗಿಲು ಹಾಕಿಕೊಂಡು ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ನಾಗರಾಜ್ ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ, ಕೆಲ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದ. ಗಂಭೀರವಾಗಿ ಹಲ್ಲೆಗೊಳಾದ ಮಹಿಳೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಬಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಚರಣೆ ನಡೆಸಿ ಈ ಸೈಕೋ ಪಾತ್ ನನ್ನು ಅರೆಸ್ಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *