7 ತಿಂಗಳ ಮಗು ರೇಪ್ ಮಾಡಿದವನಿಗೆ ಗಲ್ಲು ಶಿಕ್ಷೆ – ಕೋಲ್ಕತ್ತಾ ವಿಶೇಷ ಕೋರ್ಟ್‌ನಿಂದ ತೀರ್ಪು

ಕೋಲ್ಕತ್ತಾ: 7 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಕೋಲ್ಕತ್ತಾ (Kolkata) ವಿಶೇಷ ನ್ಯಾಯಾಲಯವು (Special Court) ಗಲ್ಲು ಶಿಕ್ಷೆ ವಿಧಿಸಿದೆ.

ನಗರದ ಬರ್ತೊಲ್ಲಾ (Burtoll) ಪ್ರದೇಶದಿಂದ ಮಗುವಿನ ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ರಜೀಬ್ ಘೋಷ್‌ನನ್ನು ಪೊಲೀಸರು ಬಂಧಿಸಿದ್ದರು. ಬ್ಯಾಂಕ್‌ಶಾಲ್ ನ್ಯಾಯಾಲಯದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ನ್ಯಾಯಾಲಯವು ಸೋಮವಾರ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ – ಮಹಿಳಾ ಸಿಎಂ ಬಿಜೆಪಿ ಮಣೆ; ನಾಳೆ ಪ್ರಮಾಣವಚನ

`ಅಪರೂಪದಲ್ಲಿ ಅಪರೂಪದ’ ವರ್ಗಕ್ಕೆ ಈ ಪ್ರಕರಣ ಸೇರಿರುವುದರಿಂದ ಮರಣದಂಡನೆ ವಿಧಿಸಬೇಕೆಂದು ವಕೀಲರು ವಾದಿಸಿದ ಬಳಿಕ ಅಂತಿಮ ಸುತ್ತಿನ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್ ಲೋಕಾಯುಕ್ತದಿಂದ ಪೂರ್ವ ನಿಯೋಜಿತ: ಅಶೋಕ್ ಕೆಂಡ

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 65(2), 140(4), 137(2) ಮತ್ತು 118 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ರಜೀಬ್ ಘೋಷ್‌ಗೆ ನ್ಯಾಯಮೂರ್ತಿ ಇಂದ್ರಿಲಾ ಮುಖರ್ಜಿ ಶಿಕ್ಷೆ ವಿಧಿಸಿದ್ದಾರೆ. ಇದನ್ನೂ ಓದಿ: ಶೋಕಾಸ್ ನೋಟಿಸ್‌ಗೆ ಯತ್ನಾಳ್ ಕೊಟ್ಟ ಉತ್ತರ ಒಪ್ಪದ ಬಿಜೆಪಿ ಶಿಸ್ತು ಸಮಿತಿ

ಕಳೆದ ವರ್ಷ ನವಂಬರ್ 30ರಂದು ರಜೀಬ್ ಘೋಷ್, ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ. ಡಿ.5ರಂದು ಜಹರ್‌ಗ್ರಾಮ್ ಜಿಲ್ಲೆಯ ಗೋಪಿಬಲ್ಲವಪುರದ ನಿವಾಸದಲ್ಲಿ ರಜೀಬ್‌ನನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಕಾರವಾರ | ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು

ರಸ್ತೆ ಬದಿಯ ಗುಡಿಸಲು ನಿವಾಸಿಯಾಗಿರುವ ಸಂತ್ರಸ್ತೆಯು, ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿಭಾಸ್ ಚಟರ್ಜಿ ತಿಳಿಸಿದ್ದಾರೆ.