ಸಾಯಿಬಾಬಾಗೆ ತಲೆಬಾಗಿದಾತ ಮೇಲೇಳಲೇ ಇಲ್ಲ- ದೇಗುಲದಲ್ಲೇ ವ್ಯಕ್ತಿಗೆ ಹೃದಯಾಘಾತ

ಭೋಪಾಲ್: ಮಂದಿರವೊಂದರಲ್ಲಿ (Temple) ದೇವರಿಗೆ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ವ್ಯಕ್ತಿಯೊಬ್ಬರು ದೇವರ ವಿಗ್ರಹದ ಎದುರೇ ಹೃದಯಾಘಾತದಿಂದ (Heart Attack) ಪ್ರಾಣಬಿಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ವರದಿಗಳ ಪ್ರಕಾರ, ಮಧ್ಯಪ್ರದೇಶದ ಕಟ್ನಿಯಲ್ಲಿನ (Katni) ಸಾಯಿಬಾಬಾ ದೇವಾಲಯದಲ್ಲಿ (Saibaba Temple) ಘಟನೆ ನಡೆದಿದೆ. ವ್ಯಕ್ತಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭ ದೇವರ ವಿಗ್ರಹದ ಬಳಿ ಬಂದು ತಲೆ ಬಾಗಿದ್ದಾರೆ. ಆದರೆ ತಲೆ ಬಾಗಿದ ವ್ಯಕ್ತಿ ಮತ್ತೆ ಎದ್ದೇಳಲೇ ಇಲ್ಲ. ಅವರು ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಳ್ಳತನದ ಶಂಕೆ – ವ್ಯಕ್ತಿಯನ್ನು ಮರಕ್ಕೆ ಕಟ್ಟಿ, ಹೊಡೆದು ಸಾಯಿಸಿದ ಕಾರ್ಮಿಕರು

ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಸಾಯಿಬಾಬಾಗೆ ಭಕ್ತಿಯನ್ನು ಅರ್ಪಿಸಲು ಮೂರ್ತಿಯ ಬಳಿ ತಲೆಬಾಗಿರುವುದು ಕಂಡುಬಂದಿದೆ. ಕ್ಷಣದಲ್ಲೇ ಅವರು ಕುಸಿದು ಬಿದ್ದಿದ್ದು, ಅಲ್ಲೇನಾಯಿತು ಎಂದು ತಿಳಿಯದ ಇತರ ಭಕ್ತರು ವ್ಯಕ್ತಿಯ ಬಳಿ ಬಂದಿದ್ದಾರೆ. ಸ್ವಲ್ಪ ಹೊತ್ತು ಅವರನ್ನು ದೋರದಲ್ಲೇ ನೋಡಿ ಬಳಿಕ ಜನರು ಒಟ್ಟಾಗಿ ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ವ್ಯಕ್ತಿ ದೇವರ ಸನ್ನಿಧಿಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಕೂದಲು ಕಸಿ ಮಾಡಲು ಹೋಗಿ ಎಡವಟ್ಟು- ನೋವಿನಿಂದ ನರಳಿ ನರಳಿ ವ್ಯಕ್ತಿ ಸಾವು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *