ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

ನೂರ್-ಸುಲ್ತಾನ್: 8ನೇ ಮಹಡಿಯಲ್ಲಿ ನೇತಾಡುತ್ತಿದ್ದ 3 ವರ್ಷದ ಮಗುವನ್ನು ರಕ್ಷಿಸಲು ಮಹಡಿ ಮೇಲೆ ಹತ್ತಿದ್ದ ಧೈರ್ಯಶಾಲಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆ ಕಝಾಕಿಸ್ತಾನ್‍ದ ಶಾಪಿಂಗ್‌ ಮಾಲ್‌ನಲ್ಲಿ ನಡೆದಿದೆ.

ತನ್ನ ತಾಯಿ ಜೊತೆ 3 ವರ್ಷದ ಮಗು ಶಾಪಿಂಗ್‍ಗೆ ಬಂದಿದ್ದ ಸಂದರ್ಭದಲ್ಲಿ ಕಿಟಕಿಯಿಂದ ಹೊರಬರಲು ಪ್ರಯತ್ನ ಮಾಡಿದೆ. ಪರಿಣಾಮ 8ನೇ ಮಹಡಿಯಲ್ಲಿ ಮಗು ಸಿಕ್ಕಿಕೊಂಡಿದೆ. ಇದನ್ನು ಗಮನಿಸಿದ ಸಬಿತ್ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ಉಳಿಸಲು ಮುಂದಾಗಿದ್ದಾರೆ. ಇದನ್ನು ಸ್ಥಳೀಯರು ವೀಡಿಯೋ ಮಾಡಿದ್ದು, ಹೀರೋ ಎಂದು ಬರೆದು ಪ್ರಶಂಸಿದ್ದಾರೆ.

ಸಬಿತ್ ತನ್ನ ಸ್ನೇಹಿತರೊಂದಿಗೆ ಶಾಪಿಂಗ್ ಮಾಲ್ ಮುಂದೆಯೇ ಓಡಾಡುತ್ತಿದ್ದರು. ಮಗುವು ಕಷ್ಟದಲ್ಲಿ ಸಿಲುಕಿದೆ ಎಂದು ತಿಳಿದ ಕೊಡಲೇ ಸ್ವಲ್ಪವೂ ಯೋಚಿಸದೆ, ಮಗುವಿನ ಜೀವ ಉಳಿಸಲು ಅವರು ಕಾರ್ಯಪ್ರವೃತ್ತರಾದರು ಎಂದು ಸಬಿತ್ ಸ್ನೇಹಿತರು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಕುರಿತು ಸಬಿತ್ ಮಾತನಾಡಿದ್ದು, ಮಗುವನ್ನು ರಕ್ಷಣೆ ಮಾಡುವ ವೇಳೆ ನನ್ನ ಬಳಿ ಸುರಕ್ಷತೆಗೆಂದು ಏನು ಇರಲಿಲ್ಲ. ಆದ್ದರಿಂದ ನನ್ನ ಸ್ನೇಹಿತ ನನ್ನ ಕಾಲುಗಳನ್ನು ಹಿಡಿದು ಮೇಲೆ ಹತ್ತಲು ಸಹಾಯ ಮಾಡಿದ. ಆ ಕ್ಷಣದಲ್ಲಿ ನಾನು ಯಾವುದರ ಬಗ್ಗೆಯೂ ಯೋಚಿಸದೆ ಮಗುವಿಗೆ ಸಹಾಯ ಮಾಡಬೇಕೆಂದುಕೊಂಡೆ ಎಂದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ 

ವೀಡಿಯೋ ವೈರಲ್ ಆಗುತ್ತಿದಂತೆ ನೆಟ್ಟಿಗರು ಸಬಿತ್‍ನನ್ನು ಹೀರೋ ಎಂದು ಮೆಚ್ಚುಕೊಂಡರು. ಇವರ ಸಾಹಸವನ್ನು ಮೆಚ್ಚಿ ನಗರದ ಉಪ ತುರ್ತು ಸಚಿವರು ಪದಕವನ್ನು ನೀಡಿ ಗೌರವಿಸಿದರು. ಅಷ್ಟೇ ಅಲ್ಲದೇ ಇವರಿಗೆ 3 ಬೆಡ್‍ರೂಮ್ ಅಪಾರ್ಟ್ಮೆಂಟ್ ಮತ್ತು ಟಿವಿಯನ್ನು ಸಹ ನೀಡಲಾಗಿದೆ.

ಸಬಿತ್ ದುಡಿಯುವುದಕ್ಕಾಗಿ ಕಝಾಕಿಸ್ತಾನ್‍ಗೆ ಬಂದಿದ್ದು, ಅವರ ಕುಟುಂಬ ನೂರ್-ಸುಲ್ತಾನ್‍ನಲ್ಲಿತ್ತು. ಈಗ ಇವರು ತಮ್ಮ 4 ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ಇರಬಹುದು ಎಂದು ಸಂತೋಷ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *