ಲಂಡನ್: ನಿದ್ರೆಯಲ್ಲಿದ್ದಾಗ ತಾನು ಕಳ್ಳತನ ಮಾಡಿದ್ದೇನೆ ಎಂದು ಪತ್ನಿ ಕನವರಿಸಿರುವುದನ್ನು ಕೇಳಿಕೊಂಡು ಪತಿ, ಪೊಲೀಸ್ ಠಾಣೆಗೆ ಪತ್ನಿ ವಿರುದ್ಧ ದೂರು ನೀಡಿರುವ ಪ್ರಸಂಗ ಲಂಡನ್‌ನಲ್ಲಿ ನಡೆದಿದೆ.

ರುತ್ ಫೋರ್ಟ್ ಎಂಬ ಮಹಿಳೆ ವಿರುದ್ಧ ಆಕೆಯ ಪತಿ ಆಂಟೊನಿ ಫೋರ್ಟ್ ದೂರು ನೀಡಿದ್ದಾನೆ. ರುತ್ ಫೋರ್ಟ್ಗೆ ಮಲಗಿದ್ದಾಗ ಕನವರಿಸುವ ಕಾಯಿಲೆ ಇದೆ. ಒಮ್ಮೆ ಆಕೆ ನಿದ್ರೆಯಲ್ಲಿದ್ದಾಗ ತಾನು ಆರೈಕೆ ಮಾಡುತ್ತಿರುವ ವೃದ್ಧೆಯೊಬ್ಬರ ಪರ್ಸ್ನಲ್ಲಿದ್ದ 7,000 ಪೌಂಡ್ ಹಣವನ್ನು ಕದ್ದಿರುವುದಾಗಿ ಕನವರಿಸಿದ್ದಾಳೆ. ಇದನ್ನು ಆಕೆಯ ಪತಿ ಕೇಳಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇದನ್ನೂ ಓದಿ: ತಾಲಿಬಾನ್ ಆಡಳಿತ – ಉದ್ಯೋಗ ಕಳೆದುಕೊಂಡು 5 ಲಕ್ಷ ಅಫ್ಘಾನಿಸ್ತಾನಿಯರು ಕಂಗಾಲು
ರುತ್ ಫೋರ್ಟ್, ಮನೆಯೊಂದರಲ್ಲಿ ಗಾಲಿಕುರ್ಚಿ ಆಶ್ರಿತ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಪರ್ಸ್ನಲ್ಲಿ ಹಣ ಕಂಡು, ಅದನ್ನು ಯಾರಿಗೂ ತಿಳಿಯದಂತೆ ಕಳ್ಳತನ ಮಾಡಿದ್ದಳು.

ತನ್ನ ಪತ್ನಿಯ ಅಪರಾಧದ ಬಗ್ಗೆ ಪ್ರತಿಕ್ರಿಯಿಸಿರುವ ಆಂಟೊನಿ, ನಾನು ರುತ್‌ಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಅವಳು ಮಾಡಿದ ಅಪರಾಧವನ್ನು ಕ್ಷಮಿಸಲಾರೆ. ದುರ್ಬಲ ವ್ಯಕ್ತಿಯಿಂದ ಹಣವನ್ನು ಕಳ್ಳತನ ಮಾಡಿರುವುದು ಹೇಯ ಕೃತ್ಯ. ಆ ಕಾರಣದಿಂದಾಗಿ ನನ್ನ ಪತ್ನಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕತ್ತರಿಯಲ್ಲಿ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನ- ರಕ್ತಮಡುವಿನಲ್ಲಿ ವ್ಯಕ್ತಿ ಪತ್ತೆ

Leave a Reply