ನಮ್ಮ ಮೆಟ್ರೋ ರೈಲಿನಲ್ಲಿ ಯುವಕನ ಉದ್ಧಟತನ – ಕನ್ನಡಿಗರು ಕೆಂಡ

ಬೆಂಗಳೂರು: ನಮ್ಮ ಮೆಟ್ರೋ (Namma Metro) ರೈಲಿನಲ್ಲಿ ಹಿಂದಿ (Hindi) ಹೇರಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕನ್ನಡ (Kannada) ಪರ ಸಂಘಟನೆಗಳು ಹಿಂದಿ ಫಲಕದ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ಮಾಡಿದ್ವು. ಅದಾದ ಬಳಿಕ ರೈಲಿನೊಳಗೆ ಇದ್ದ ಹಿಂದಿ ಭಾಷೆಯಲ್ಲಿ ಬರೆದಿದ್ದ ಫಲಕಕ್ಕೆ (Sign Board) ಮೆಟ್ರೋ ಸಿಬ್ಬಂದಿ ಟೇಪ್ ಅಂಟಿಸಿದ್ದರು. ಈ ಟೇಪನ್ನು ಕಿತ್ತೆಸೆದು ಇದೀಗ ಯುವನೋರ್ವ ಉದ್ಧಟತನ ಮೆರೆದಿದ್ದಾನೆ.

ಅಕ್ಷತ್ ಗುಪ್ತಾ ಎಂಬಾತ ಮೆಟ್ರೋದಲ್ಲಿ ಪ್ರಯಾಣಿಸುವಾಗ ಹಿಂದಿ ಭಾಷೆಯಲ್ಲಿ ಬರೆದಿದ್ದ ಫಲಕಕ್ಕೆ ಹಾಕಿದ್ದ ಟೇಪ್ ಹರಿದು ಹಾಕಿ ಹಿಂದಿ ಫಲಕ ಕಾಣಿಸುವಂತೆ ಮಾಡಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದನ್ನೂ ಓದಿ: ಸರ್ಜಾಪುರ ಸುಲಿಗೆ ಪ್ರಕರಣದ ಮತ್ತೊಂದು ವೀಡಿಯೋ ಬಹಿರಂಗ – ಡಿಕ್ಕಿ ಹೊಡೆದು ಬಾನೆಟ್ ಏರಿದ ಕಿಡಿಗೇಡಿ

ಅಕ್ಷತ್‌ ಗುಪ್ತಾನ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕನ್ನಡ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಬಿಗ್‍ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ (Rupesh Rajanna) ಈ ಯುವಕನನ್ನು ಭೇಟಿ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಗೆ ಅಕ್ಷತ್ ಗುಪ್ತಾ ಕ್ಷಮೆಯಾಚಿಸಿದ್ದಾನೆ. ಇದನ್ನೂ ಓದಿ: ಸ್ಮಾರ್ಟ್ ಟಿವಿ ಮೂಲಕ ವಿದ್ಯಾಭ್ಯಾಸಕ್ಕೆ ನೆರವಾದ ಶಾಸಕ ಬೈರತಿ ಸುರೇಶ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Comments

Leave a Reply

Your email address will not be published. Required fields are marked *