KSRTC ಬಸ್ ಗೆ ಜಾಗ ಕೊಡದೇ 20 ಕಿ.ಮೀ ಕಾರು ಚಾಲನೆ – ವಿಡಿಯೋ

ಹಾಸನ: ಕೆಎಸ್‍ಆರ್ ಟಿಸಿ ಬಸ್ ಗೆ ಸೈಡ್ ಬಿಡದೇ ಸುಮಾರು 20 ಕಿಲೋ ಮೀಟರ್ ವರೆಗೆ ವ್ಯಕ್ತಿಯೊಬ್ಬ ಮನಬಂದಂತೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಉದಯಪುರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಈ ಘಟನೆ ನಡೆದಿದೆ. ಹಾಸನ ಕೆಎ 04 00-9187 ನಂಬರ್ ನ ಈಟೀಯಸ್ ಕಾರನ್ನು ವ್ಯಕ್ತಿಯೊಬ್ಬ ಕೆಎಸ್‍ಆರ್ ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬಸ್ ಮುಂದೆ ಹೋಗದಂತೆ ಅಡ್ಡಲಾಗಿ ಓಡಿಸಿದ್ದಾನೆ. ಬಸ್ ನಲ್ಲಿದ್ದವರೇ ಆ ಪುಂಡನ ಆಟಾಟೋಪವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಸುಮಾರು 20 ಕಿಲೋ ಮೀಟರ್ ವರೆಗೂ ಕೆಎಸ್‍ಆರ್ ಟಿಸಿ ಬಸ್ ಗೆ ಓವರ್ ಟೇಕ್ ಮಾಡಲು ಬಿಡದೆ ಸತಾಯಿಸಿ ಕಾರು ಚಲಾಯಿಸಿದ್ದಾನೆ. ಕೊನೆಗೆ ಉದಯಪುರ ಬಳಿ ಬಸ್ ಡ್ರೈವರ್ ಕಾರನ್ನು ಅಡ್ಡಗಟ್ಟಲು ಯತ್ನಿಸಿದಾಗ ರಸ್ತೆ ಬದಲಿಸಿಕೊಂಡು ಪರಾರಿಯಾಗಿದ್ದಾನೆ.

https://www.youtube.com/watch?v=1OIlVN4KoB0

Comments

Leave a Reply

Your email address will not be published. Required fields are marked *