ರೌಡಿಸಂ ತೋರಿಸೋದಕ್ಕೆ ಹೋಗಿ ಹೆಣವಾದ ಬೈಕ್ ಸವಾರ

ಬೆಂಗಳೂರು: ರೈಲ್ವೆ ಗೇಟ್ ಕ್ರಾಸಿಂಗ್ ಜಾಗದಲ್ಲಿ ಬೈಕ್ ಸವಾರನೊಬ್ಬ ರೌಡಿಸಂ ತೋರಿಸೋದಕ್ಕೆ ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ.

ರೈಲ್ ಪಾಸ್ ಆದಮೇಲೆ ಗೇಟ್ ಓಪನ್ ಆಗಿದ್ದು, ಈ ಸಂದರ್ಭದಲ್ಲಿ ಸವಾರನೊಬ್ಬ ಪೋನಿನಲ್ಲಿ ಮಾತನಾಡಿಕೊಂಡು ರಸ್ತೆ ಮಧ್ಯೆ ಬೈಕ್ ನಿಲ್ಲಿಸಿಕೊಂಡು ಬಿಲ್ಡಪ್ ಕೊಡುತ್ತಿದ್ದನು. ಈ ವೇಳೆ ಹಿಂದೆಯಿಂದ ವಾಹನ ಸವಾರರು ಹಾರ್ನ್ ಮಾಡಿದಾಗ ಬೈಕ್ ನಿಲ್ಲಿಸಿ ಆವಾಜ್ ಹಾಕಿದ್ದಾನೆ. ಅಲ್ಲದೆ ತನ್ನ ಬೈಕ್ ನಲ್ಲಿದ್ದ ಕತ್ತಿಯನ್ನು ತೆಗೆದು ರೌಡಿಸಂ ತೋರಿಸಲು ಮುಂದಾಗಿದ್ದಾನೆ.

ಇದೇ ಸಮಯದಲ್ಲಿ ಮತ್ತೊಬ್ಬ ಬೈಕ್ ಸವಾರ ಆತನ ಕೈಯಲ್ಲಿದ್ದ ಕತ್ತಿಯನ್ನು ಕಿತ್ತುಕೊಂಡು ಒಂದೇ ಏಟು ಕುತ್ತಿಗೆಗೆ ಹೊಡೆದಿದ್ದಾನೆ. ಅಷ್ಟೇ ಒಂದೇ ಏಟಿಗೆ ನೆಲಕ್ಕುರಿಳಿದ ಆ ಪುಡಿ ರೌಡಿ ಕೊನೆಯುಸಿರೆಳೆದಿದ್ದಾನೆ. ಸುಮ್ಮನೆ ಕಾಲು ಕೆರೆದುಕೊಂಡು ಗಲಾಟೆ ಮಾಡುಲು ಹೋದವ ಸ್ಮಶಾನ ಸೇರಿದ್ದಾನೆ.

ರಸ್ತೆಯಲ್ಲಿ ರೌಡಿಸಂ ಮಾಡಲು ಹೋದವನಿಗೆ ಆತನ ಕತ್ತಿಯಲ್ಲೇ ಹೊಡೆದ ವ್ಯಕ್ತಿ ನನಗೂ ಇದಕ್ಕೂ ಸಂಬಂಧವೇ ಇಲ್ಲದವನಂತೆ ತನ್ನ ಬೈಕಿನಲ್ಲಿ ಹೋಗಿದ್ದಾನೆ. ಈ ಘಟನೆಯ ದೃಶ್ಯ ರೈಲ್ವೆ ಗೇಟಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ಘಟನೆ ಯಾವ ಪ್ರದೇಶದಲ್ಲಿ ಆಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ಇದು ಉತ್ತರ ಭಾರತದ ಕಡೆ ಕಳೆದ ಗುರುವಾರ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *