ಮದ್ವೆಯಾಗ್ತೀನೆಂದು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ!

ಮುಂಬೈ: ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮಹಿಳೆಯಿಂದ 10 ಲಕ್ಷದಲ್ಲಿ 7 ಲಕ್ಷ ಹಣ ಪಡೆದು ವಂಚನೆಗೈದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು 38 ವರ್ಷದ ನಿತಿನ್ ಶ್ಯಾಮ್‍ರಾವ್ ಝೆಂದೆ ಎಂದು ಗುರುತಿಸಲಾಗಿದೆ. ಮಹಿಳೆಗೆ ಮದುವೆಯಾಗಿ ನಂಬಿಸಿ ಮೋಸಮಾಡಿದ್ದಾನೆ.

ಆರೋಪಿ ಹಾಗೂ ಮಹಿಳೆ ಒಂದೇ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಇಬ್ಬರು ಮಾತನಾಡುತ್ತಿದ್ದು, ಒಂದು ದಿನ ಮಹಿಳೆ ತನಗೆ ಡಿವೋರ್ಸ್ ಆಗಿರುವ ವಿಚಾರವನ್ನು ವ್ಯಕ್ತಿ ಮುಂದೆ ಪ್ರಸ್ತಾಪಿಸಿದ್ದಾಳೆ. ಆ ಬಳಿಕ ನಿತಿನ್, ನಾನು ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ ಎಂಬುದಾಗಿ ವರದಿಯಾಗಿದೆ.

ಆರೋಪಿಯು ಮಹಿಳೆಯ ಮೇಲೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ ಮದುವೆಯಾಗಬೇಕಾದ್ರೆ 10 ಲಕ್ಷ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ಸಂತ್ರಸ್ತೆ 7 ಲಕ್ಷ ಹಣವನ್ನೂ ಕೂಡ ಇಟ್ಟಿದ್ದಾರೆ. ಹಣ ತನ್ನ ಕೈಗೆ ಸಿಕ್ಕಿದಾಗಿನಿಂದ ಆರೋಪಿ ಮಹಿಳೆಯನ್ನು ದೂರ ಮಾಡಲು ಆರಂಭಿಸಿದ್ದಾನೆ. ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿಲಾಗಿದ್ದು, ಹಣಕ್ಕೆ ಬೇಡಿಕೆಯಿಟ್ಟ ಕಾರಣಕ್ಕಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮದುವೆಯಾಗುವುದಾಗಿ ಹೇಳಿ 21 ವರ್ಷದ ಯುವತಿಯ ಜೊತೆ ವ್ಯಕ್ತಿಯೊಬ್ಬ ದೈಹಿಕ ಸಂಪರ್ಕ ಬೆಳೆಸಿದ್ದನು. ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿ, ಯುವತಿ ಜೊತೆ ಸುಮಾರು 1 ವರ್ಷದಿಂದ ನಿರಂತರ ಸಂಪರ್ಕದಲ್ಲಿದ್ದನು. ಈ ವೇಳೆ ಆಕೆಗೆ ಪ್ರಪೋಸ್ ಕೂಡ ಮಾಡಿದ್ದನು. ನಂತರ ನಿನ್ನನ್ನು ಒಂದು ಬಾರಿ ಭೇಟಿಯಾಗಬೇಕು. ಹೀಗಾಗಿ ಹೋಟೆಲೊಂದಕ್ಕೆ ಯುವತಿಯನ್ನು ಬರಲು ಹೇಳಿದ್ದನು. ಹೀಗೆ ಬಂದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದನು. ತನ್ನ ಕಾಮತೃಷೆ ತೀರಿಸಿಕೊಂಡ ಬಳಿಕ ಆತ ಯುವತಿ ಜೊತೆ ಮಾತನಾಡವುದನ್ನು ನಿಲ್ಲಿಸಿದನು. ಅಲ್ಲದೆ ಮದುವೆ ವಿಚಾರವನ್ನು ಕೂಡ ಕೈಬಿಟ್ಟನು.

Comments

Leave a Reply

Your email address will not be published. Required fields are marked *