ಪತ್ನಿಯನ್ನ ಅನುಮಾನಿಸಿ ಮಕ್ಕಳಿಗೆ ವಿಷ ಕುಡಿಸಿ, ತಾನೂ ಕುಡಿದ

ಹೈದರಾಬಾದ್: ಪತ್ನಿಯೊಂದಿಗೆ ಜಗಳವಾಡಿದ ನಂತರ 30 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಗಂಡು ಮಕ್ಕಳಿಗೆ ವಿಷ ಕುಡಿಸಿ, ತಾನೂ ಸೇವಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಸುರೇಶ್ ಮಕ್ಕಳಿಗೆ ವಿಷ ಕುಡಿಸಿದ ತಂದೆ. ಸದ್ಯ ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಕಿರಿಯ ಮಗ ಪ್ರಣೀತ್(5) ವಿಷಪ್ರಾಶನದಿಂದ ಸಾವನ್ನಪ್ಪಿದ್ದರೆ, ಹಿರಿಯ ಮಗ ಪ್ರದೀಪ್(6) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಪತ್ನಿ ಮಂಜುಳ ತನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಸುರೇಶ್ ಅನುಮಾನಪಟ್ಟಿದ್ದ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಪದೆ ಪದೇ ಜಗಳವಾಡುತ್ತಿದ್ದ, ಹೀಗಾಗಿ ಬೇಸರಗೊಂಡು ವಿಷ ಕುಡಿಯಲು ಮುಂದಾಗಿದ್ದ ಎಂದು ವರದಿಯಾಗಿದೆ.

ಮಕ್ಕಳು ನಿದ್ದೆ ಮಾಡುವಾಗ ಹಣ್ಣಿನ ಜ್ಯೂಸ್‍ನಲ್ಲಿ ಕೀಟನಾಶಕವನ್ನು ಬೆರೆಸಿ, ಅವರು ಎಚ್ಚರಗೊಂಡ ನಂತರ ಕುಡಿಸಿದ್ದ. ವಿಷ ಕುಡಿಸಿದ ಬಳಿಕ ತನ್ನ ಮಕ್ಕಳನ್ನು ಅಳಿಯಂದಿರ ಮನೆಯಲ್ಲಿ ಬಿಟ್ಟು ಬಂದಿದ್ದಾನೆ. ಮರಳಿ ಮನೆಗೆ ಬಂದು ತಾನೂ ಸಹ ಕೀಟನಾಶಕವನ್ನು ಸೇವಿಸಿದ್ದಾನೆ.

ಪತ್ನಿ ತನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಸುರೇಶ್ ಅನುಮಾನಿಸುತ್ತಿದ್ದ. ಈ ಕಾರಣಕ್ಕಾಗಿಯೇ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಸುರೇಶ್ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಈತನ ನಡವಳಿಕೆಯಿಂದ ಬೇಸತ್ತು ಮಂಜುಳ ಮಕ್ಕಳು ಮಲಗಿದ್ದಾಗ ಪಕ್ಕದಲ್ಲಿದ್ದ ತನ್ನ ಹೆತ್ತವರ ಮೆನೆಗೆ ಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆಗ ಸುರೇಶ್ ಮಕ್ಕಳಿಗೆ ವಿಷ ಕುಡಿಸಿ, ತಾನೂ ಸೇವಿಸಿದ್ದಾನೆ. ವಿಷ ಪ್ರಾಶನದಿಂದ ಕಿರಿಯ ಮಗ ಸಾವನ್ನಪ್ಪಿದ್ದಾನೆ. ಹಿರಿಯ ಮಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *