ವಿಮಾನದ ಶೌಚಾಲಯದಲ್ಲಿ‌ ಸಿಗರೇಟ್ ಸೇದಿದ ವ್ಯಕ್ತಿ ಅರೆಸ್ಟ್‌

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂದರ್ಭದಲ್ಲಿ ಅಸಭ್ಯ ವರ್ತನೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ, ತುರ್ತು ನಿರ್ಗಮನ ದ್ವಾರ ತೆರೆಯುವುದು, ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ಹೀಗೆ ಅನೇಕ ಘಟನೆಗಳು ನಡೆದಿವೆ. ಅದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ವರದಿಯಾಗಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru International Airport) ಪೊಲೀಸರಿಂದ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಸ್ಸಾಂ ಮೂಲದ ಶೇಹರಿ ಚೌದರಿ ಎಂಬಾತ ಬಂಧಿತ ವ್ಯಕ್ತಿ. ಇದನ್ನೂ ಓದಿ: ಕಾಂಗ್ರೆಸ್ ಪಾರ್ಟಿಯ ಅರ್ಥ ಕಮಿಷನ್, ಕರಪ್ಷನ್ – ಜೆ.ಪಿ.ನಡ್ಡಾ

ಶುಕ್ರವಾರ ಇಂಡಿಗೊ ವಿಮಾನದಲ್ಲಿ (Indgo Flight) ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ. ಈ ವೇಳೆ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಹೋಗಿದ್ದಾನೆ. ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿರುವ ವಿಚಾರ ತಿಳಿದ ಸಿಬ್ಬಂದಿ, ಚೌದರಿಯನ್ನು ಹೊರಗೆ ಕರೆದು ಬುದ್ದಿ ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ವಿಮಾನ ಕ್ಯಾಪ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರಿಗೆ ದೂರು ನೀಡಿದ್ದ‌. ದೂರಿನ ಅಧಾರದ ಮೇಲೆ ಶೇಹರಿ ಚೌದರಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹೆಚ್‌.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದ ವೈದ್ಯರು – ಹೆಚ್‌ಡಿಡಿ 100 ಕಿ.ಮೀ ರೋಡ್‌ ಶೋ ರದ್ದು

Comments

Leave a Reply

Your email address will not be published. Required fields are marked *