ಮಂಡ್ಯ: ಇತ್ತೀಚೆಗೆ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ನನ್ನು ಕೊಲೆ ಮಾಡಲಾಗಿತ್ತು. ಈಗ ಅದೇ ಗ್ರಾಮದಲ್ಲಿ ಮತ್ತೊಂದು ಕೊಲೆ ನಡೆದಿದೆ.
ಬಸವಯ್ಯ(60) ಕೊಲೆಯಾದ ದುರ್ದೈವಿ. ಇವರು ಗ್ರಾಮದ ಮುತ್ತುರಾಯ ದೇವಸ್ಥಾನದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಯಾರೋ ದುಷ್ಕರ್ಮಿಗಳು ಬಸವಯ್ಯನನ್ನು ಕೊಂದು ದೇವಾಲಯದ ಒಡವೆ, ಹಣ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮದ್ದೂರು ನಗರದಲ್ಲಿ ಕತ್ತು ಕೊಯ್ದು ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

ಕಳೆದ ಡಿಸೆಂಬರ್ 24 ರಂದು ತೊಪ್ಪನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಪ್ರಕಾಶ್ ಅವರನ್ನು ಮದ್ದೂರಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಮುಂದುವರಿದಿತ್ತು. ಪೊಲೀಸರು ಕಾವಲಿದ್ದ ಊರಿನ ಸಮೀಪವೇ ಅಮಾಯಕ ಕಾವಲುಗಾರನ ಬರ್ಬರ ಹತ್ಯೆಯಾಗಿದೆ. ಇದನ್ನೂ ಓದಿ: ಜೆಡಿಎಸ್ ಮುಖಂಡನ ಮರ್ಡರ್ ಕೇಸ್ – ಕೊಲೆಗೈದ ಸ್ಥಳದಲ್ಲಿ ಹೊಂಚು ಹಾಕಿದ್ದ ಹಂತಕರು

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಗೂ ಈ ಕೊಲೆಗೂ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪ್ರಕಾಶ್ ಸ್ವಗ್ರಾಮ ತೊಪ್ಪನಹಳ್ಳಿಯಲ್ಲಿ ಘಟನೆ ನಡೆದಿರುವುದು ಇದೀಗ ತೀವ್ರ ಅನುಮಾನ ಉಂಟುಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply