ಕೋಲಾರ: ಮಗಳನ್ನ ಚುಡಾಯಿಸಿದ ಪೋಕರಿಗಳನ್ನ ಪ್ರಶ್ನಿಸಿದ್ದಕ್ಕೆ ತಂದೆಯನ್ನೇ ದಾರುಣವಾಗಿ ಕೊಲೆಗೈದ ಅಮಾನವೀಯ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾರಿಕುಪ್ಪಂ ಬಡಾವಣೆಯಲ್ಲಿ ನಡೆದಿದೆ.
ಕುಮಾರ್(48) ಮೃತ ದುರ್ದೈವಿ. ಕೊಲೆಗೈದ ಆರೋಪಿಗಳನ್ನು ಸುರೇಶ್ ಹಾಗೂ ಆಲ್ವಿನ್ ಎಂದು ಗುರುತಿಸಲಾಗಿದ್ದು, ಇವರು ಮಾರಿಕುಪ್ಪಂ ನಿವಾಸಿಗಳಾಗಿದ್ದಾರೆ.
ಕುಮಾರ್ ಎಂಬವರ ಮಗಳನ್ನ ಸುರೇಶ್ ಹಾಗೂ ಆಲ್ವಿನ್ ಚುಡಾಯಿಸಿದ್ದರು. ಇದು ತಂದೆಯ ಗಮನಕ್ಕೆ ಬಂದಿದ್ದು, ಕುಮಾರ್ ಆ ಪೋಕರಿಗಳನ್ನು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಸಿಡಿದೆದ್ದ ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ತಲೆ, ಮುಖಕ್ಕೆ ಹೊಡೆದು ಕುಮಾರ್ ಅವರನ್ನೇ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಕೆಜಿಎಫ್ ಎಸ್ಪಿ ಲೊಕೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply