ಯುವಕನೋರ್ವನ ಬರ್ಬರ ಕೊಲೆ- ರುಂಡ ಕತ್ತರಿಸಿ, ಮುಂಡ ಮಾತ್ರ ಬಿಟ್ಟು ಹೋದರು!

ಕಲಬುರಗಿ: ಮಾರಕಾಸ್ತ್ರಗಳಿಂದ ರುಂಡ ಕತ್ತರಿಸಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಅಲಗೋಡ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಲಬುರಗಿಯ ಭವಾನಿ ನಗರ ನಿವಾಸಿ ಸಿದ್ದೋಜಿ (22) ಮೃತ ಯುವಕ. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಸಿದ್ದೋಜಿ ಮನೆಯಿಂದ ಹೊರಬಂದಿದ್ದರು. ಅವರ ಹಿಂದೆಯೇ ಬಂದ ಮೂರರಿಂದ ನಾಲ್ಕು ಜನರ ತಂಡವು ಅವರನ್ನು ಅಪಹರಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಸಿದ್ದೋಜಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಗಾಬರಿಗೆ ಒಳಗಾಗಿದ್ದ ಅವರು ತಕ್ಷಣವೇ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿದ್ದೋಜಿ ಪತ್ತೆಗಾಗಿ ತನಿಖೆ ನಡೆಸಿದ್ದರು. ಇಂದು ಮಧ್ಯಾಹ್ನ ಕಲಬುರಗಿ ನಗರದಿಂದ 15 ಕಿ.ಮೀ. ದೂರದ ಅಲಗೋಡ್ ಗ್ರಾಮದ ಗೋಮಾಳದಲ್ಲಿ ಮೃತದೇಹವೊಂದು ಬಿದ್ದಿದ್ದು, ಅದಕ್ಕೆ ರುಂಡವೇ ಇರಲಿಲ್ಲವೆಂದು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸಿದ್ದೋಜಿ ಕುಟುಂಬಸ್ಥರು ಕೊಲೆಯಾದ ವ್ಯಕ್ತಿ ಸಿದ್ದೋಜಿ ಅವರೇ ಎನ್ನುವುದನ್ನು ಖಚಿತವಾಗಿದೆ.

ಕೇವಲ ಮುಂಡಭಾಗವಿದ್ದು, ರುಂಡದ ಪತ್ತೆಯಾಗಿಲ್ಲ. ಇತ್ತ ಸಂಜೆ ಮೃತರ ಕುಟುಂಬದವರ ಶಂಕೆ ಆಧಾರ ಮೇಲೆ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *