ಒಂದೇ ಮಹಿಳೆ ಜೊತೆ ಇಬ್ಬರ ಅನೈತಿಕ ಸಂಬಂಧ – ಸ್ನೇಹಿತನನ್ನೇ ಕೊಂದು ಜೈಲುಪಾಲಾದ ಯುವಕ

ರಾಯಚೂರು: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಸೇಹಿತನನ್ನೇ ಹತ್ಯೆಗೈದಿದ್ದ ಆರೋಪಿಯನ್ನು ಬಳಗಾನೂರು ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲೆಯ ಮಸ್ಕಿ ತಾಲೂಕಿನ ತಲೆಖಾನ್ ಗ್ರಾಮದಲ್ಲಿ ಮೇ 8 ರಂದು ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಕೊಲೆಯಾದ ಬಸವರಾಜ್ ಹಾಗೂ ಆರೋಪಿ ಜಗದೀಶ್ ಭತ್ತ ಕಟಾವ್ ಮಾಡುವ ಯಂತ್ರದ ಚಾಲಕರಾಗಿದ್ದು, ಸಿಂಧನೂರು ತಾಲೂಕಿನ ಜವಳಗೇರಾ ಬಳಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಮಹಿಳೆಯೊಂದಿಗೆ ಇಬ್ಬರೂ ಅಕ್ರಮ ಸಂಬಂಧವನ್ನು ಹೊಂದಿದ್ದರು. ಯಾವಾಗ ಇಬ್ಬರೂ ಒಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ತಿಳಿಯಿತೋ ಒಬ್ಬರಿಗೊಬ್ಬರು ಕತ್ತಿ ಮಸಿಯಲು ಶುರುಮಾಡಿದ್ದರು. ಆದರೆ ಜಗದೀಶ್, ಬಸವರಾಜ್‍ನನ್ನು ನಿರ್ಜನ ಪ್ರದೇಶದಲ್ಲಿ ಶೇವಿಂಗ್ ಬ್ಲೇಡ್‍ನಿಂದ ಕತ್ತುಕೊಯ್ದು ಕೊಲೆ ಮಾಡಿ ಸುಟ್ಟು ಹಾಕಿ ಪರಾರಿಯಾಗಿದ್ದ. ಬಸವರಾಜ್ ಕೈಯಲ್ಲಿದ್ದ ಉಂಗುರದಿಂದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆರೋಪಿ ಜಗದೀಶ್‍ನನ್ನು ಬಳಗಾನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದಲಿತ ಸಿಎಂ ಆಗ್ತಾರೆ ಅಂತ ಕನಸು ಕಾಣೋನು ಹುಚ್ಚ: ಎ.ನಾರಾಯಣಸ್ವಾಮಿ

POLICE JEEP

ಮೇ 8 ರಂದು ಬಸವರಾಜ್ ತನ್ನ ಸ್ನೇಹಿತ ಜಗದೀಶ್ ಜೊತೆ ಒಂದೇ ಬೈಕ್‍ನಲ್ಲಿ ಹೋದ ಬಳಿಕ ನಾಪತ್ತೆಯಾಗಿದ್ದನು. ತನ್ನ ತಮ್ಮನ ಮದುವೆಗೆ ಹಣ ಹೊಂದಿಸುತ್ತಿದ್ದ ಬಸವರಾಜ್, ಪರಿಚಯಸ್ಥರಿಂದ ಸಾಲ ಕೊಡಿಸುವುದಾಗಿ ಹೇಳಿ ಜಗದೀಶ್ ಕರೆದುಕೊಂಡು ಹೋಗಿದ್ದನು. ಆದರೆ ಮಾರ್ಗ ಮಧ್ಯೆ ಮೂತ್ರವಿಸರ್ಜನೆ ನೆಪಕ್ಕೆ ನಿರ್ಜನ ಪ್ರದೇಶಕ್ಕೆ ತೆರಳಿ ಕೊಲೆ ಮಾಡಿ, ನಂತರ ಬೈಕ್‍ನಲ್ಲಿದ್ದ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಜಗದೀಶ್ ಪರಾರಿಯಾಗಿದ್ದನು. ಮೂರ್ನಾಲ್ಕು ದಿನಗಳಾದರೂ ಬಸವರಾಜ್ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರಿಗೆ ಅನುಮಾನ ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಬಳಗಾನೂರು ಠಾಣೆ  ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ಘಟನೆಯಲ್ಲಿ ವಿವಾಹಿತ ಮಹಿಳೆಯ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ

Comments

Leave a Reply

Your email address will not be published. Required fields are marked *