ಅಂಧ ಯುವತಿಗೆ ಬಾಳು ಕೊಟ್ಟ ಯುವಕ -ಸಂಭ್ರಮದಿಂದ ನಡೆಯಿತು ಮದುವೆ

ಕೋಲಾರ: ತಾನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕು, ಕೈ ತುಂಬಾ ಹಣ-ಅಂತಸ್ತು ತರಬೇಕು ಎನ್ನುವ ಜನಗಳ ನಡುವೆ ಯಾವುದನ್ನು ಲೆಕ್ಕಿಸದೆ ಅಂಧ ಹುಡುಗಿಯನ್ನು ಮದುವೆಯಾಗುವ ಮೂಲಕ ಸಮಾಜಕ್ಕೆ ವ್ಯಕ್ತಿಯೊಬ್ಬರು ಮಾದರಿಯಾದ್ದಾರೆ.

ಹೌದು, ಕೋಲಾರದ ಬಯಲು ಬಸವೇಶ್ವರ ದೇವಾಲಯದಲ್ಲಿಂದು ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮದ ರುದ್ರಮ್ಮ ಹಾಗೂ ಬಾಗಲಕೋಟೆ ಮೂಲದ ಸಂಗಮೇಶ ಮದುವೆ ಸಂಭ್ರಮದ ನಡೆಯಿತು.

ಹುಟ್ಟಿನಿಂದ ಅಂಧರಾಗಿರುವ ರುದ್ರಮ್ಮ ಅವರು ಓದಿನಲ್ಲಿ ಜಾಣೆಯಾಗಿದ್ದು, ಅಂಧರಿಗಾಗಿ ನಡೆಸುವ ಬೆಂಗಳೂರಿನ ವಸತಿ ಶಾಲೆಯಲ್ಲಿ ಸಂಗೀತ ಮತ್ತು ಇಂಗ್ಲೀಷ್ ಭಾಷೆ ಕಲಿಸುವ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಶಿಕ್ಷಣವನ್ನು ಅಭ್ಯಾಸ ಮಾಡುತ್ತಿರುವಾಗಲೇ ಬಸವರಾಜು ಎಂಬುವರ ಮೂಲಕ ರುದ್ರಮ್ಮಳಿಗೆ ಉತ್ತರ ಕರ್ನಾಟಕದ ಬಾಗಲಕೋಟೆ ಮೂಲದ ಖಾಸಗಿ ಕಂಪೆನಿಯಲ್ಲಿ ಸೇಲ್ಸ್ ಮೆನ್ ಆಗಿರುವ ಸಂಗಮೇಶ್ ಪರಿಚಯವಾಗಿ ಮದುವೆ ಸಹ ಮಾಡಿಕೊಂಡಿದ್ದಾರೆ.

ಇನ್ನೂ ಹುಟ್ಟು ಕುರುಡಳಾಗಿರುವ ರುದ್ರಮ್ಮ ಅವರು ಕೋಲಾರ ನಗರದಲ್ಲಿನ ವಿಮಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಗಮೇಶ ಸ್ನೇಹಿತರ ಮೂಲಕ ರುದ್ರಮ್ಮಳನ್ನು ಮದುವೆಯಾಗುವ ಕುರಿತು ತಿಳಿಸಿದ್ದ. ಎರಡೂ ಕುಟುಂಬಗಳವರು ಚರ್ಚಿಸಿ ನಿರ್ಧರಿಸಿದ ಬಳಿಕ ರುದ್ರಮ್ಮ, ಸಂಗಮೇಶ ಅವರ ಮದುವೆ ನೂರಾರು ಜನರ ಸಮ್ಮುಖದಲ್ಲಿ ಸೋಮವಾರ ಕೋಲಾರದಲ್ಲಿನ ಬಯಲು ಬಸವೇಶ್ವರ ದೇವಾಲಯದಲ್ಲಿ ಸರಳವಾಗಿ ನಡೆಯಿತು.

ಈ ಕುರಿತು ಮಾತನಾಡಿದ ರುದ್ರಮ್ಮ, ಚಿಕ್ಕಂದಿನಲ್ಲಿ ಕಳೆದುಕೊಂಡ ತನ್ನ ತಾಯಿ ಈ ಸಂಭ್ರಮ ನೋಡುವಂತಿದ್ದರೆ ಚೆನ್ನಾಗಿತ್ತು. ಇದೀಗ ನನ್ನ ತಾಯಿ ಜಾಗದಲ್ಲಿ ಗಂಡ ಸಂಗಮೇಶ್ ಇದ್ದಾರೆ ಅವರು ನನ್ನ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇಬ್ಬರ ಮದುವೆಗೆ ಸಾಕ್ಷಿಯಾದ ಸಂಬಂಧಿಕರು, ಹಿತೈಷಿಗಳು ಮನಸಾರೆ ಶುಭ ಕೋರಿದ್ದು, ದೃಷ್ಟಿಯಿಲ್ಲದ ಯುವತಿಯೊಬ್ಬಳಿಗೆ ಬದುಕು ಕೊಟ್ಟ ಸಂಗಮೇಶ್ ಅವರ ಹೃದಯವಂತಿಕೆಯನನ್ನು ಹಲವರು ಮೆಚ್ಚಿದ್ದಾರೆ.

Comments

Leave a Reply

Your email address will not be published. Required fields are marked *