ಪ್ರೀತ್ಸಿ ಮದ್ವೆಯಾದವ ಕೈ ಕೊಟ್ಟ, ಮಗು&ನಿನ್ನ ನೋಡ್ಕೋತ್ತೀನಿ ಅಂದವನೂ ಬಿಟ್ಟು ಹೋದ: ಪತ್ನಿ ಕಣ್ಣೀರು

ಹಾವೇರಿ: ಯುವಕನೊಬ್ಬ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡು ಗರ್ಭಿಣಿ ಮಾಡಿ ಬಳಿಕ ಕಣ್ಮರೆಯಾದ. ಆ ಬಳಿಕ ಸೋದರ ಸಂಬಂಧಿಯೊಬ್ಬ ತಾನು ಆಕೆಯನ್ನು ಮತ್ತು ಆಕೆಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮದುವೆಯಾಗಿ ಇದೀಗ ಆತನೂ ಕೈ ಕೊಟ್ಟ ಘಟನೆಯೊಂದು ನಡೆದಿದೆ.

ಈ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಸದ್ಯ ನೊಂದ ಮಹಿಳೆ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.

ಘಟನೆ ವಿವರ: 22 ವರ್ಷದ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಮೂಲದ ಹನುಮಂತ ಎಂಬ ಯುವಕನನ್ನ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮ-ಪ್ರಣಯ ಅಂತ ಇಬ್ಬರು ಪ್ರೇಮವಿವಾಹ ಮಾಡಿಕೊಂಡಿದ್ರಂತೆ. ಬಳಿಕ ಯುವಕ ಯುವತಿಯನ್ನು ಗರ್ಭಿಣಿ ಮಾಡಿ ಪರಾರಿ ಆಗಿದ್ದಾನಂತೆ. ಆದ್ರೆ ಬಳಿಕ ಯುವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ತಂದೆ-ತಾಯಿ ಜೊತೆಗೆ ಕೆಲವು ತಿಂಗಳು ಕಳೆದಿದ್ದಾರೆ. ಆದ್ರೆ ಸಹೋದರ ಸಂಬಂಧಿಯಾದ ಸಂಜೀವ ಎಂಬಾತನ ಜೊತೆ ಮಹಿಳೆಗೆ ಮತ್ತೆ ಮದುವೆಯಾಗುತ್ತೆ, ಮಗು ಹಾಗೂ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೆನೆ ಅಂತಾ ಒಂದು ವರ್ಷ ಕಾಲ ಈಕೆಯ ಜೊತೆಗಿದ್ದು ಈಗ ಮಹಿಳೆಯನ್ನು ಬಿಟ್ಟು ಹೋಗಿದ್ದಾನೆ. ಸದ್ಯ ಯುವತಿ ನನಗೆ ನ್ಯಾಯಬೇಕು ಅಂತಾ ಕಣ್ಣೀರು ಹಾಕುತ್ತಿದ್ದಾರೆ.

ಸದ್ಯ ಮಹಿಳೆ ಹಾಗೂ ಮಗು ರಾಣೇಬೆನ್ನೂರು ನಗರದ ನಿಶಾರ್ಡ ಮಹಿಳಾ ಸ್ವಾಂತನ ಕೇಂದ್ರದಲ್ಲಿ ಆಶ್ರಯಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Comments

Leave a Reply

Your email address will not be published. Required fields are marked *