ಪತ್ನಿ ಬಿಟ್ಟು ಮಂಗಳಮುಖಿ ಜೊತೆ ಸ್ನೇಹ- 3 ವರ್ಷದ ಬಳಿಕ ಟಿಕ್‍ಟಾಕ್‍ನಲ್ಲಿ ಸಿಕ್ಕ

ಚೆನ್ನೈ: ನಾಪತ್ತೆಯಾದ ವ್ಯಕ್ತಿಯೊಬ್ಬ ಟಿಕ್‍ಟಾಕ್ ಮೂಲಕ ಪತ್ತೆಯಾಗಿದ್ದು, ಇದೀಗ ಒತ್ತಾಯಪೂರ್ವಕವಾಗಿ ಆತ ಮತ್ತೆ ತನ್ನ ಮನೆ ಸೇರಿದ ಘಟನೆಯೊಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣಗಿರಿ ನಿವಾಸಿ ಸುರೇಶ್ ಎಂಬಾತ ಜಯಪ್ರದಾ ಎಂಬಾಕೆಯನ್ನು ವಿವಾಹವಾಗಿದ್ದನು. ಬಳಿಕ ದಂಪತಿಗೆ ಇಬ್ಬರು ಮಕ್ಕಳೂ ಹುಟ್ಟಿದವು. ಆದರೆ 2016ರಂದು ಏಕಾಏಕಿ ಕಾಣೆಯಾಗಿದ್ದ ಸುರೇಶ್, ಮತ್ತೆ ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ನೊಂದ ಪತ್ನಿ ಜಯಪ್ರದಾ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಅಲ್ಲದೆ ಸುರೇಶ್ ಗೆಳೆಯರು, ಸಂಬಂಧಿಕರಲ್ಲಿ ಪತಿಯನ್ನು ಹುಡುಕಿ ಕೊಡುವಂತೆ ಕೇಳಿಕೊಂಡಿದ್ದರು.

ಇತ್ತ ಪತ್ನಿಯ ದೂರು ಸ್ವೀಕರಿಸಿದ ಪೊಲೀಸರು ಸುರೇಶ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು.

ಕೆಲ ವಾರಗಳ ಹಿಂದೆ ಜಯಪ್ರದಾ ಸಂಬಂಧಿಕರೊಬ್ಬರು, ಟಿಕ್ ಟಾಕ್ ವಿಡಿಯೋದಲ್ಲಿ ಸುರೇಶ್ ನನ್ನು ನೋಡಿದ್ದರು. ಹೀಗಾಗಿ ಅದು ಸುರೇಶನೇ ಎಂದು ತಿಳಿಯಲು ಜಯಪ್ರದಾ ಅವರನ್ನು ಸಂಪರ್ಕಿಸಿದರು. ಹಾಗೆಯೇ ವಿಡಿಯೋದಲ್ಲಿ ಪತಿಯನ್ನು ಗುರುತಿಸಿದ ಜಯಪ್ರದಾ ಕೂಡಲೇ ಪೊಲೀಸರಿಗೆ ಮಾಹಿತಿ ನಿಡಿದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಸುರೇಶ್ ನನ್ನು ಟ್ರ್ಯಾಕ್ ಮಾಡಿದಾಗ ಆತ ಹೊಸೂರಿನಲ್ಲಿರುವುದು ಬೆಳಕಿಗೆ ಬಂದಿದೆ.

ಕೌಟುಂಬಿಕ ಸಮಸ್ಯೆಯಿಂದಾಗಿ ಸುರೇಶ್ ತನ್ನ ಕುಟುಂಬಸ್ಥರನ್ನು ತೊರೆದಿದ್ದನು. ಬಳಿಕ ಹೊಸೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಇದೇ ಸಂದರ್ಭದಲ್ಲಿ ಆತನಿಗೆ ಟಿಕ್ ಟಾಕ್ ಮೂಲಕ ಮಂಗಳಮುಖಿಯೊಬ್ಬರ ಪರಿಚಯವಾಗುತ್ತದೆ. ಹಾಗೆಯೇ ಇಬ್ಬರೂ ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೋವನ್ನು ಜಯಪ್ರದಾ ಸಂಬಂಧಿಕರೊಬ್ಬರು ನೋಡಿದ್ದು, ಈ ವೇಳೆ ಸುರೇಶ್ ಪತ್ತೆಯಾಗಿದ್ದಾನೆ. ಸದ್ಯ ಪೊಲೀಸರು ಸುರೇಶನನ್ನು ಪತ್ತೆ ಹಚ್ಚಿ ಪತ್ನಿ ಜಯಪ್ರದಾ ಜೊತೆ ಕಳುಹಿಸಿಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *