ಚಲಿಸುತ್ತಿದ್ದ ರೈಲಿಗೆ ನೂಕಿ ಮಹಿಳೆಯ ಹತ್ಯೆ – ನಾನು ದೇವರು ಎಂದ ಆರೋಪಿ

ವಾಷಿಂಗ್ಟನ್: ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಮಹಿಳೆಯೊಬ್ಬರನ್ನು ನೂಕಿದ್ದ ಕಾರಣ ಆಕೆ ಸಾವನ್ನಪ್ಪಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನಾನು ದೇವರು. ನಾನು ಇದನ್ನು ಮಾಡಬಹುದು ಎಂಬ ಹೇಳಿಕೆ ನೀಡಿದ್ದು, ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ.

ಶನಿವಾರ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಸುರಂಗಮಾರ್ಗ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಎದುರು 40 ವರ್ಷದ ಏಷ್ಯನ್ ಮಹಿಳೆಯನ್ನು ಸೈಮನ್ ಮಾರ್ಷಲ್ ಎಂಬ ವ್ಯಕ್ತಿ ತಳ್ಳಿದ್ದ. ಇದರಿಂದ ಮಹಿಳೆ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು. ಇದನ್ನೂ ಓದಿ: ಮೆಟ್ರೋ ರೈಲ್ವೆ ಹಳಿಗೆ ತಳ್ಳಿದ ವ್ಯಕ್ತಿ – ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಕೊಲೆಯ ಸ್ಥಳದಿಂದ ವ್ಯಕ್ತಿ ಪಲಾಯನಗೈದಿದ್ದು, ನಂತರ ಒಂದು ಗಂಟೆಯ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ವರದಿಗಳ ಪ್ರಕಾರ ಆರೋಪಿ, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಆತ ದರೋಡೆ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ನಂತರ 2021ರ ಆಗಸ್ಟ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

ಪೊಲೀಸರು ಆರೋಪಿಯನ್ನು ಪ್ರಶ್ನಿಸಿದಾಗ ಆತ ನಾನು ದೇವರು. ನಾನು ಇದನ್ನು ಮಾಡಬಲ್ಲೆ ಎಂದು ಉತ್ತರಿಸಿದ್ದಾನೆ.

Comments

Leave a Reply

Your email address will not be published. Required fields are marked *