ಹೆಂಡತಿ, ಮಕ್ಕಳನ್ನು ಕೊಂದು ನೇಣಿಗೆ ಶರಣಾದ

ಚೆನ್ನೈ: ಕೋಪದ ಭರದಲ್ಲಿ ಬ್ಯಾಟ್‍ನಿಂದ ಹೊಡೆದು ಪತ್ನಿಯನ್ನು ಕೊಂದು, ಪುತ್ರರರ ಕತ್ತು ಹಿಸುಕಿ ಕೊಲೆಗೈದು ನಂತರ ತಾನು ನೇಣಿಗೆ ಶರಣಾದ ಘಟನೆ ಪೆರುಂಗುಡಿಯಲ್ಲಿ ನಡೆದಿದೆ.

ಮಣಿಕಂದನ್(35), ತರಗ ಪ್ರಿಯಾ(30), ಮಕ್ಕಳಾದ ತರಣ್ (11) ಮತ್ತು ಒಂದೂವರೆ ವರ್ಷದ ತಗನ್ ಮೃತರಾಗಿದ್ದಾರೆ. ಪೊಲೀಸರ ಪ್ರಕಾರ, ಮಣಿಕಂದನ್ ಖಾಸಗಿ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ. ಮಕ್ಕಳು, ಪತ್ನಿಯನ್ನುಕೊಂದು ತಾನೂ ಆತ್ಮಹತ್ಯೆಮಾಡಿಕೊಂಡಿದ್ದಾನೆ. ಇದನ್ನೂ ಓದಿ: NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

ಪೆರುಂಗುಡಿಯಲ್ಲಿ ಅಪಾರ್ಟ್ ಮೆಂಟ್‍ನಲ್ಲಿ  ಮಣಿಕಂದನ್ ಕುಟುಂದೊಂದಿಗೆ ವಾಸವಾಗಿದ್ದರು. ಮನೆಯ ಬಾಗಿಲು ಮುಚ್ಚಿದ್ದರಿಂದ ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಪೊಲೀಸರು ಮನೆಯ ಬಾಗಿಲು ಹೊಡೆದು ನೋಡಿದಾಗ ಮಣಿಕಂದನ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿತ್ತು. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

POLICE JEEP

ದಂಪತಿ ನಡುವೆ ಸಾಲದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕೋಪದ ಭರದಲ್ಲಿ ಮಣಿಕಂದನ್ ಬ್ಯಾಟ್‍ನಿಂದ ಹೊಡೆದು ತನ್ನ ಹೆಂಡತಿ ಕೊಂದಿದ್ದಾನೆ. ನಂತರ ಮಕ್ಕಳನ್ನು ಕೊಂದು ತಾನೂ ನೇಣು ಹಾಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪರಾಧ ನಡೆದ ಸ್ಥಳವನ್ನು ನೋಡಿದಾಗ, ಮಣಿಕಂದನ್ ಮೊದಲು ತನ್ನ ಹೆಂಡತಿಯನ್ನು ಕೊಲೆ ಮಾಡಿ ನಂತರ ತನ್ನ ಇಬ್ಬರು ಗಂಡುಮಕ್ಕಳನ್ನು ಕತ್ತು ಹಿಸುಕಿ ಕೊನೆಗೆ ನೇಣು ಹಾಕಿಕೊಂಡಿರಬೇಕು, ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *