ಪೊಲೀಸ್ ಕಾಲೋನಿಯಲ್ಲೇ ಗುಂಡಿನ ದಾಳಿ: ಹೆಂಡತಿ, ಮಗಳನ್ನು ಕೊಂದು ತಾನೂ ಆತ್ಮಹತ್ಯೆ

Crime-Scene

ಪಾಟ್ನಾ: ಇಲ್ಲಿನ ಗಾರ್ಡನಿಬಾಗ್ ಪ್ರದೇಶದ ಪೊಲೀಸ್ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ತನ್ನ ಪತ್ನಿ ಮತ್ತು ಮಗಳನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

CRIME 2

ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ರಾಜೀವ್‌ಕುಮಾರ್ ಎಂದು ಗುರುತಿಸಲಾಗಿದೆ. ಈತ ನಿರುದ್ಯೋಗಿಯಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

ಈ ಕುರಿತು ಮಾಹಿತಿ ನೀಡಿರುವ ಪಾಟ್ನಾ ಎಸ್‌ಎಸ್‌ಪಿ ಮಾನವಜೀತ್ ಸಿಂಗ್ ಧಿಲ್ಲೋನ್, ಇಂದು ಮಧ್ಯಾಹ್ನ 12:40ರ ವೇಳೆಗೆ ನಿಸಾಬಾದ್‌ನ ಪೊಲೀಸ್ ಕಾಲೋನಿಯಲ್ಲಿ ಹೋಗುತ್ತಿದ್ದ ವೇಳೆ ರಾಜೀವ್ ಗುಂಡಿನ ದಾಳಿ ನಡೆಸಿದ್ದಾನೆ. ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿದ ನಮ್ಮ ಪೊಲೀಸರ ತಂಡ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ; ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

crime

ಪ್ರಾಥಮಿಕ ತನಿಖೆಗಳ ಪ್ರಕಾರ, ರಾಜೀವ್ ಮೊದಲ ಪತ್ನಿ ಕೆಲವು ವರ್ಷಗಳ ಹಿಂದೆ ಸಹಜ ಕಾರಣಗಳಿಂದ ನಿಧನರಾದರು. ನಂತರ ಈತ ತನ್ನ ಅತ್ತಿಗೆ ಪ್ರಿಯಾಂಕಾಳನ್ನೇ ವಿವಾಹವಾದರು. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರಿಂದ ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *